ಬಿಜೆಪಿಯಲ್ಲಿ ರೌ#ಡಿ ಮೋರ್ಚಾಗೆ ಮನ್ನಣೆ; ಒಬ್ಬೊಬ್ಬರಾಗಿಯೇ ನಾನೂ ರೌ#ಡಿಯಾಗಿದ್ದೆ, ಗೂಂ#ಡಾಗಿರಿ ಮಾಡಿದ್ದೆ ಎಂದು ಅರ್ಹತೆಗಳನ್ನು ಮುಂದಿಡುತ್ತಿದ್ದಾರೆ: ಕಾಂಗ್ರೆಸ್ ಟ್ವಿಟ್
ಬೆಂಗಳೂರು: ನಾನು ಕಾಪಿ ಮಾಡುವುದರಲ್ಲಿ ಪಿಹೆಚ್‌ಡಿ ಮಾಡಿದ್ದು, ಗೂಂ#ಡಾಗಿರಿ ಮಾಡುತ್ತಿದ್ದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧ ಸರಣಿ ಟ್ವಿಟ್ ಮಾಡಿ ತನ್ನ ಆಕ್ರೋಶವನ್ನು ಹೊರಹಾಕಿದೆ.
ಯಾವೊಬ್ಬ ಬಿಜೆಪಿಗರಿಗೂ ಒಳ್ಳೆಯ ಇತಿಹಾಸವಿಲ್ಲವೇಕೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯಲ್ಲಿ ರೌ#ಡಿ ಮೋರ್ಚಾಗೆ ಮನ್ನಣೆ ಸಿಗುತ್ತಿರುವಾಗ ಬಿಜೆಪಿಗರು ಒಬ್ಬೊಬ್ಬರಾಗಿಯೇ ನಾನೂ ರೌ#ಡಿಯಾಗಿದ್ದೆ, ನಾನೂ ಗೂಂ#ಡಾಗಿರಿ ಮಾಡಿದ್ದೆ ಎಂದು ತಮ್ಮ ಅರ್ಹತೆಗಳನ್ನು ಮುಂದಿಡುತ್ತಿದ್ದಾರೆ ಎಂದು ಆರೋಪಿಸಿದೆ.
ಸಚಿವ ಶ್ರೀರಾಮುಲು ಅವರು ಅಂದು ಕಾಪಿ ಹೊಡೆಯುವುದರಲ್ಲಿ ಪಿಹೆಚ್‌ಡಿ ಮಾಡಿದ್ದರೇ, ಇಂದು ಭ್ರಷ್ಟಾಚಾರದಲ್ಲಿ ಪಿಹೆಚ್‌ಡಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಯಾವುದೇ ರೌ#ಡಿಗಳನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ, ಸೇರಿಸಿಕೊಳ್ಳುವುದಿಲ್ಲ ಎಂದಿದ್ದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನವೀನ ಕುಮಾರ್ ಕಟೀಲ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದವರು ಬೆತ್ತನಗೆರೆ ಶಂಕರನನ್ನು ಸೇರಿಸಿಕೊಂಡಿದ್ದೇವೆ ಎಂದು ಒಪ್ಪಿಕೊಂಡಿದ್ದು, ಈಗ ನೀವು ಹೇಳಿದ್ದು ಸುಳ್ಳು ಎಂಬುದನ್ನು ಒಪ್ಪುತ್ತೀರಾ? ತಪ್ಪಾಗಿದೆ ಎಂದಾದರೆ ಏಕೆ ಇನ್ನೂ ಪಕ್ಷದಿಂದ ಹೊರಹಾಕಿಲ್ಲ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.