
ಕಾಪುವಿನಲ್ಲಿ ಮತ್ತೆ ಅರಳಿದ ಕಮಲ: ಬಿಜೆಪಿಯ ಸುರೇಶ್ ಶೆಟ್ಟಿ ಗುರ್ಮೆಗೆ ಗೆಲುವು: ಇಲ್ಲಿದೆ ಅಭ್ಯರ್ಥಿಗಳಿಗೆ ಸಿಕ್ಕ ಮತಗಳ ವಿವರ...
Saturday, May 13, 2023
ಕಾಪು: ಈ ಬಾರಿಯಾಯ ಜಿದ್ದಾಜಿದ್ದಿನ ಕಣವಾಗಿದ್ದ ಕಾಪು ಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಿದೆ. ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಅವರು ಕಾಂಗ್ರೆಸಿನ ವಿನಯ ಕುಮಾರ್ ಸೊರಕೆಯವರನ್ನು ಸೋಲಿಸಿದ್ದಾರೆ.
ಹಾಲಿ ಶಾಸಕ ಲಾಲಾಜಿ ಮೆಂಡನ್ ಅವರ ಬದಲಿಗೆ ಬಿಜೆಪಿ ಸುರೇಶ್ ಶೆಟ್ಟಿ ಗುರ್ಮೆಯವರನ್ನು ಕಣಕ್ಕಿಳಿಸಿದ್ದು, ಈ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿತ್ತು.
ಸುರೇಶ್ ಶೆಟ್ಟಿ ಗುರ್ಮೆ ಅವರು 79793 ಮತ ಪಡೆದರೆ, ವಿನಯ ಕುಮಾರ್ ಸೊರಕೆಯವರಿಗೆ 67804 ಮತ ಪಡೆದು ಸೋಲು ಕಂಡಿದ್ದಾರೆ. SDPI ಹನೀಫ್ ಮೂಳೂರು 1612 ಮತ ಪಡೆದರೆ, ಜೆಡಿಎಸ್'ನ ಸಬೀನಾ ಸಮದ್ 565 ಮತ ಪಡೆದಿದ್ದು, AAP ಪಾರ್ಟಿಯ ಯಸ್.ಆರ್.ಲೋಬೊ 248 ಅವರು ಮತ ಪಡೆದಿದ್ದಾರೆ. 798 NOTA ಮತಗಳು ಚಲಾವಣೆಯಾಗಿದೆ.