ಬೆಲೆ ಏರಿಕೆ, ಜನರ ಸಂಕಷ್ಟಕ್ಕೆ ಬಾರದ ಬಿಜೆಪಿ ಕೇವಲ ಭಾವನಾತ್ಮಕ ವಿಷಯವನ್ನಷ್ಟೇ ಮಾತನಾಡುತ್ತಿದೆ: ಸುಧೀರ್ ಕುಮಾರ್ ಮರೋಳಿ

ಬೆಲೆ ಏರಿಕೆ, ಜನರ ಸಂಕಷ್ಟಕ್ಕೆ ಬಾರದ ಬಿಜೆಪಿ ಕೇವಲ ಭಾವನಾತ್ಮಕ ವಿಷಯವನ್ನಷ್ಟೇ ಮಾತನಾಡುತ್ತಿದೆ: ಸುಧೀರ್ ಕುಮಾರ್ ಮರೋಳಿ

ಬ್ರಹ್ಮಾವರ: ಕಾಂಗ್ರೆಸ್ ಕಾಲದಲ್ಲಿ ದೀಪದೆಣ್ಣೆಗೆ 1 ಲೀ. ಗೆ 40 ರೂ. ಇತ್ತು. ಇಂದು 120 ರೂ ಆಗಿದೆ. ಕೊರೋನ ಬಂದಾಗ ಕೆಲಸವನ್ನು ಕಳೆದುಕೊಂಡಾಗ, ನೆರೆ ಬಂದಾಗ, ಪೆಟ್ರೋಲ್ ದರ, ಆಟೋ ಚಾಲಕರ ಆಟೋ ಪ್ರೀಮಿಯಂ ರೇಟು ಜಾಸ್ತಿಯಾಗಿದೆ. ಇಂತಹ ಕಷ್ಟಕರವಾದ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ಜನರ ಬಳಿ ಸುಳಿಯಲಿಲ್ಲ. ನೀರುಳ್ಳಿ ಬೆಲೆ ಜಾಸ್ತಿಯಾಗಿದೆ ಎಂದರೆ ನಿರ್ಮಲಾ ಸೀತಾರಾಂ ನಾನು ನೀರುಳ್ಳಿ ತಿನ್ನುವುದಿಲ್ಲ ಎನ್ನುತ್ತಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ನ ಬೆಲೆ ಏರಿಕೆಯಾಗಿದೆ ಎಂದರೆ, ನೀವು ರಸ್ತೆ, ಸೇತುವೆ, ನಿರುದ್ಯೋಗದ ಬಗ್ಗೆ ಕೇಳಬೇಡಿ, ನಿಮ್ಮ ಕಷ್ಟದ ಬಗ್ಗೆ ಕೇಳಬೇಡಿ, ನೀವು ಲವ್ ಜಿಹಾದ್ ಬಗ್ಗೆ ಮಾತನಾಡಿ ಎಂದು ನಳಿನ್ ಕುಮಾರ್ ಕಟೀಲ್ ಹೇಳುತ್ತಾರೆ  ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಉದಾಹರಣೆಗಳನ್ನು ಕೊಟ್ಟು ಹೇಳಿದರು.

ಅವರು ನಿನ್ನೆ ವಿಧಾನ ಸಭಾ ಚುನಾವಣೆ ಪೂರ್ವಭಾವಿಯಾಗಿ  ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕಳಕರ್ಜೆ ಬಳಿ ಹಮ್ಮಿಕೊಂಡಿದ್ದ  ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ  ಪ್ರಸಾದ್ ರಾಜ್ ಕಾಂಚನ್, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ರಾಜ್ಯ ಸಂವಹನ ವಿಭಾಗದ ಮುಖ್ಯಸ್ಥ ಅಮೃತ್ ಶೆಣೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ ಗಫೂರ್, ಕೆಪಿಸಿಸಿ ವಕ್ತಾರೆ ವೆರೋನಿಕಾ ಕರ್ನೇಲಿಯೋ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿನಕರ್ ಹೇರೂರು, ಕೃಷ್ಣಮೂರ್ತಿ ಆಚಾರ್ಯ, ಸುಧಾಕರ್ ಶೆಟ್ಟಿ ಮೇರ್ಮಾಡಿ, ಭುಜಂಗ ಶೆಟ್ಟಿ, ನಿತ್ಯಾನಂದ ಶೆಟ್ಟಿ, ಗೋಫಿ ನಾಯ್ಕ್, ಅಶೋಕ ಶೆಟ್ಟಿ, ಕುಶಲ್ ಶೆಟ್ಟಿ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article