
ದಿಲ್ಲಿಯಲ್ಲಿ ಸಿದ್ದರಾಮಯ್ಯ, ಆಮೀರ್ ಖಾನ್ ಮುಖಾಮುಖಿ
Tuesday, June 24, 2025
ನವದೆಹಲಿ: ರಾಷ್ಟ್ರಪತಿ ಭೇಟಿಗಾಗಿ ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿ ಭವನಕ್ಕೆ ತೆರಳಿದಾಗ ಬಾಲಿವುಡ್ ನಟ, ನಿರ್ದೇಶಕ ಆಮೀರ್ ಖಾನ್ ಮುಖಾಮುಖಿಯಾದರು.
ರಾಜ್ಯದ ಏಳು ಮಸೂದೆಗಳಿಗೆ ಅನುಮೋದನೆ ನೀಡುವಂತೆ ಕೋರಿ ಸಿಎಂ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಗಾಗಿ ನವದೆಹಲಿ ತೆರಳಿದ್ದರು. ಇಂದು ರಾಷ್ಟ್ರಪತಿ ಭವನಕ್ಕೆ ತೆರಳಿದಾಗ ಬಾಲಿವುಡ್ ನಟ, ನಿರ್ದೇಶಕ ಮುಖಾಮುಖಿಯಾದರು. ಈ ವೇಳೆ ಪರಸ್ಪರ ಕುಶಲೋಪರಿ ವಿಚಾರಿಸಿ, ಶುಭ ಹಾರೈಸಿದರು.
ಸಿಎಂ ಸಿದ್ದರಾಮಯ್ಯ ಅವರು ಸಚಿವರಾದ ಮಹದೇವಪ್ಪ, ಕೆ.ಜೆ ಚಾರ್ಜ್, ಸತೀಶ್ ಜಾರಕಿಹೊಳಿ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ರಾಜ್ಯಪಾಲರಿಂದ ಬಂದಿರುವ ರಾಜ್ಯದ ಏಳು ಮಸೂದೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.