
ಉಚ್ಚಿಲ ಮೊಗವೀರ ಭವನದ ಮುಂದೆ ಬೈಕೊಂದಕ್ಕೆ ಅಪರಿಚಿತ ವಾಹನ ಡಿಕ್ಕಿ: ಯುವಕನ ಸ್ಥಿತಿ ಗಂಭೀರ; ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ 'ಜಲ್ಲು'
Wednesday, October 15, 2025

ಉಚ್ಚಿಲ: ಇಲ್ಲಿನ ಮೊಗವೀರ ಭವನದ ಮುಂದೆ ಬೈಕೊಂದಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ರಾಜಸ್ತಾನದ ಕರೌಲಿ ಜಿಲ್ಲೆಯ ಹೆಮ್ ಸಿಂಗ್ ಎಂದು ಗುರುತಿಸಲಾಗಿದೆ. ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.
ಉಚ್ಚಿಲ ಮೊಗವೀರ ಭವನದ ಮುಂದೆ ರಾತ್ರಿ 10.45ರ ಸುಮಾರಿಗೆ ಪಡುಬಿದ್ರೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಸವಾರ ಹೆಮ್ ಸಿಂಗ್ ಸ್ಥಿತಿ ಗಂಭೀರವಾಗಿದ್ದು, ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತ ನಡೆದ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಸಾಮಾಜಿಕ ಕಾರ್ಯಕರ್ತ ಜಲಾಲುದ್ದೀನ್ ಜಲ್ಲು ಉಚ್ಚಿಲ ಅವರು ಉಚ್ಚಿಲ SDPI ಅಂಬ್ಯುಲೆನ್ಸ್ ಚಾಲಕ ಕೆ.ಎಂ.ಸಿರಾಜ್ ಅವರ ಸಹಾಯದಿಂದ ಉಡುಪಿಯ ಆದರ್ಶ್ ಆಸ್ಪತ್ರೆಗ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.