ಉಡುಪಿ: ಲಾಡ್ಜ್ ನಲ್ಲಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲೇ ವ್ಯಕ್ತಿ ಮೃತ್ಯು
Monday, February 9, 2026
ಉಡುಪಿ: ಉಡುಪಿ ನಗರದ ಹಳೆ ಸರಕಾರಿ ಬಸ್ ನಿಲ್ದಾಣದ ಬಳಿ ಇರುವ ವಸತಿಗೃಹದಲ್ಲಿ ಯಾತ್ರಾರ್ಥಿಯೊಬ್ಬರು ಕುಳಿತ ಕುರ್ಚಿಯಲ್ಲಿಯೇ ಸಾವನಪ್ಪಿರುವ ಘಟನೆ ನಡೆದಿದೆ.
ವ್ಯಕ್ತಿಯು ಕೊಠಡಿಯಿಂದ ಹೊರಬರದಿರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಸಂಶಯಪಟ್ಟು ಬಾಗಿಲು ತೆರೆದು ನೋಡಿದಾಗ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ. ಮೃತ ವ್ಯಕ್ತಿಯನ್ನು ದಾವಣಗೆರೆಯ ನಿವಾಸಿ ಮಹಾಂತೇಶ ಎಂ.ಜಿ. ಎಂದು ಗುರುತಿಸಲಾಗಿದೆ. ಸಾವಿಗೆ ಸ್ವಷ್ಟ ಕಾರಣ ತಿಳಿದುಬಂದಿಲ್ಲ. ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತ ವ್ಯಕ್ತಿ ಮನೆಯಲ್ಲಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ಬಂದಿದ್ದನೆಂದು ತಿಳಿದುಬಂದಿದೆ.
ನಗರ ಪೋಲಿಸ್ ಠಾಣೆಯ ಎಸ್ಐ ನಾರಾಯಣ, ಎಎಸ್ ಐ ಹರೀಶ್, ಹೆಡ್ ಕಾನ್ಸ್ಟೇಬಲ್ ಆಶಾಲತಾ ಕಾನೂನು ಪ್ರಕ್ರಿಯೆಯನ್ನು ಮೃತನ ಹೆಂಡತಿ, ಹಾಗೂ ಅಣ್ಣನ ಸಮಕ್ಷಮದಲ್ಲಿ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.