ಮಂಗಳೂರು: ಈ ಬಾರಿಯ PUC ವಿಜ್ಞಾನದಲ್ಲಿ ಅತ್ಯುತ್ತಮ ಅಂಕಗಳಿಸುವ ಮೂಲಕ ಸಾಧನೆ ಮಾಡಿದ ಜೋಕಟ್ಟೆ ನಿವಾಸಿ ರುಕ್ಯ ನಫೀಯ ಅವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಖ್ಯಾತ ಪ್ರೇರಣಾ ಭಾಷಣಗಾರ ಹಾಗು ಪೋಷಕರ ತಜ್ಞ ರಫೀಕ್ ಮಾಸ್ಟರ್ ಅವರು ತಮ್ಮ ನಿವಾಸಕ್ಕೆ ಆಹ್ವಾನಿಸಿ ಸನ್ಮಾನಿಸಿ ಅಭಿನಂದಿಸಿದ್ದಾರೆ.
ರುಕ್ಯ ನಫೀಯ ಮಂಗಳೂರು ಲೇಡಿ ಹಿಲ್‌ನ ವಿಕ್ಟೋರಿಯಾ ಗರ್ಲ್ಸ್ ಪಿಯು ಕಾಲೇಜಿನಲ್ಲಿ ಪ್ರಥಮ ಅತೀ ಹೆಚ್ಚು ಅಂಕ ಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಆಗಿದ್ದಾರೆ. ಅವರು ಅನ್ವರ್ ಜೋಕಟ್ಟೆ ಮತ್ತು ಶಬೀನಾ ಅವರ ಹೆಮ್ಮೆಯ ಪುತ್ರಿಯಾಗಿದ್ದಾರೆ. ಸನ್ಮಾನದ ವೇಳೆ ರುಕ್ಯ ನಫೀಯ ಅವರ ಚಿಕ್ಕಪ್ಪ ಮನ್ಸೂರ್ ಜೋಕಟ್ಟೆ ಉಪಸ್ಥಿತರಿದ್ದರು.
