ರಾಜ್ಯ ದೇವಾಡಿಗರ ಸಂಘಟನೆ 100 ವರ್ಷದ ಸಾರ್ಥಕ ಪಯಣದ ಹಿಂದೆ ಹಿರಿಯರ ತ್ಯಾಗವಿದೆ: ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ‌ ಉದ್ಘಾಟಿಸಿದ ವೀರಪ್ಪ ಮೊಯ್ಲಿ

ಮಂಗಳೂರು: ದೇವಾಡಿಗ ಸಮುದಾಯದ ಏಳಿಗೆಯಲ್ಲಿ ಸಂಘಟನೆಯ ಪಾತ್ರ ಮಹತ್ತರವಾಗಿದೆ. ಕಳೆದ 100 ವರ್ಷದಿಂದ ಉತ್ತಮವಾದ ಯೋಜನೆ, ಯೋಚನೆಗಳನ್ನು ರೂಪಿಸಿಕೊಂಡು ಬಂದಿದೆ. ದುರ್ಬಲ ವರ್ಗದ ಜನರಿಂದ ಕೂಡಿದ ಸಂಸ್ಥೆಯೊಂದು ಶತಮಾನೋತ್ಸವ ಆಚರಿಸುವುದು ಅಷ್ಟು ಸುಲಭವಲ್ಲ. ಇಡೀ ಸಮುದಾಯ ಸಂಘಟಿಸಿ, ಅದಕ್ಕೆ ಶಕ್ತಿಯನ್ನು ಕೊಟ್ಟು, ಪ್ರತಿಭಾ ಸರೋವರ ನಿರ್ಮಿಸಿದ ಕರ್ನಾಟಕ ದೇವಾಡಿಗರ ಸಂಘದ ಕಾರ್ಯ ಶ್ಲಾಘನೀಯವಾಗಿದೆ. ಹಿರಿಯರ ತ್ಯಾಗ, ಬೆವರಿನ ಹನಿಯಿದೆ. ಸಮಾಜಕ್ಕೆ ಬದುಕನ್ನೇ ಸರ್ಮಪಿಸಿಕೊಂಡ ಹಲವು ನಾಯಕರ ದೂರಗಾಮಿ ಚಿಂತನೆಯೇ ಸಮಾಜದ ಅಭ್ಯುದಯಕ್ಕೆ ಕಾರಣವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯ್ಲಿ ಹೇಳಿದರು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಶತಮಾನೋತ್ಸವ‌ ಸಮಾರಂಭ ಕಾರ್ಯಕ್ರಮವನ್ನು ಸೆ.20 ರವಿವಾರದಂದು ಮಂಗಳೂರಿನ ಟಿ.ಎಂ.ಎ. ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

















ದೇವಾಡಿಗ ಸಮುದಾಯ ಶ್ರೇಷ್ಟ ಪ್ರತಿಭೆಯ ಸುಂದರ ಸರೋವರ. ಆ ಸರೋವರದಲ್ಲಿನ ಅಪ್ರತಿಮ ಪ್ರತಿಭೆಗಳನ್ನು ಯಾರಿಗೂ ಹೋಲಿಸಲಾಗದು. ವಿವಿಧ ಉದ್ಯಮದಲ್ಲಿ ತೊಡಗಿಸಿಕೊಂಡವರಿದ್ದಾರೆ. ಅವಕಾಶಗಳಿಗೆ ಕೊರತೆಯಿದ್ದರೂ ಪ್ರತಿಭೆಗೆ ಕೊರತೆಯಿಲ್ಲ. ಅವಕಾಶಗ ಕೊರತೆಯನ್ನು ನಿಭಾಯಿಸಿ ಪ್ರತಿಭೆಗಳಿಗೆ ಉತ್ತೇಜಿಸುವ ಕೆಲಸ ಮಾಡಬೇಕು. ಮುಂಬೈ ಸಂಘ ನೀಡಿದ ಸ್ಕಾಲರ್‌ಶಿಪ್ ನನ್ನ ಹೆಚ್ಚಿನ ಓದುವಿಕೆಗೆ ಕಾರಣವಾಯಿತು. ದೇವಾಡಿಗ ಸಮುದಾಯಕ್ಕೆ ಸದಾ ಋಣಿಯಾಗಿರುವೆ ಎಂದು ನೆನಪನ್ನು ಹಂಚಿಕೊಂಡರು. 

ಜೀವನದಲ್ಲಿ ಯಶಸ್ಸು‌ಪಡೆಯಲು ಹೆಜ್ಜೆಹೆಜ್ಜೆಯಲ್ಲೂ ಕಷ್ಟವನ್ನು ಪಡಬೇಕು. ಸಮಾಜಕ್ಕೆ ದುಡಿಯುವ ತುಡಿತ ಇರಬೇಕು. ಯುವ ಜನಾಂಗವು ತನ್ಮ ಮನೆಯನ್ನು ಮಾತ್ರ ನೋಡದೆ ಇಡೀ ದೇಶದ ಸಮುದಾಯಗಳ, ಜನರ ಭಾವನೆಗಳ ಅರಿವು ಅಗತ್ಯ. ಜಾತಿ ಸಂಘಟನೆಯಲ್ಲಿ ಒಗ್ಗಟ್ಟು ಸ್ಥಾಪಿಸುವುದು ಸವಾಲಿನ ಸಂಗತಿ. ಜಾತಿ, ಧರ್ಮ, ಬೇಧಗಳು ಜಾಸ್ತಿಯಿರುವಲ್ಲಿ ಒಗ್ಗಟ್ಟು ಹೆಚ್ಚಿಸಲು ಎಲ್ಲರೂ ಸಮಾನ ಮನಸ್ಸಿನಿಂದ ಸಾಗರದಂತೆ ಒಗ್ಗೂಡಬೇಕು. ತಮ್ಮ ಬಗ್ಗೆಗಿನ ಕೀಳರಿಮೆಯನ್ನು ಮೊದಲು ತೊಡೆದು ಹಾಕಬೇಕು. ಬದುಕಿನಲ್ಲಿ ಯಾವುದೂ ಕೂಡ ಉಡುಗೊರೆಯಾಗಿ ಬರೋದಿಲ್ಲ. ಹೋರಾಟ, ಶ್ರಮ ಅತ್ಯಗತ್ಯ. ಹುಟ್ಟಿನಿಂದ ಬಂದ ಮೌಡ್ಯವನ್ನು ಹೋಗಲಾಡಿಸಬೇಕು ಎಂದು ಕರೆಕೊಟ್ಟರು.

ಇದೇ ವೇಳೆ ಮಾಜಿ‌ ಸಿಎಂ ಡಾ. ಎಂ. ವೀರಪ್ಪ ಮೊಯ್ಲಿ ಅವರನ್ನು ಸನ್ಮಾನಿಸಲಾಯಿತು. ಮಹತ್ವಾಕಾಂಕ್ಷೆಯ ಯೋಜನೆಯ ಬಗ್ಗೆ 'ವಿಷನ್ ಮಂಗಳಾ' ಗೌರವಾಧ್ಯಕ್ಷ ಡಾ. ದೇವರಾಜ್ ಕೆ. ಮಾತುಗಳನ್ನಾಡಿದರು.

ಸನ್ಮಾ‌ನ:

ವಿದ್ವಾನ್ ಅಣ್ಣು ದೇವಾಡಿಗ, ಲಲಿತಾ-ಗೋಪಾಲ ಶೇರಿಗಾರ್ ದಂಪತಿ, ಡಾ. ಪ್ರವೀಣ್ ಕುಮಾರ್ ಹೊಸಬೆಟ್ಟು, ಸರೋಜಿನಿ ದೇವಾಡಿಗ, ವೇಣಿ ಮರೋಳಿ, ಡಾ. ವಿಶ್ವನಾಥ ಶೇರಿಗಾರ್, ವಿಜಯಲಕ್ಷ್ಮೀ ಶಿಬರೂರು, ಭಾಸ್ಕರ ಮೊಯಿಲಿ, ಪ್ರವೀಣ್ ದೇವಾಡಿಗ ಪೇಟೆಮನೆ ಕಾರ್ಕಳ ಮೊದಲಾದವರನ್ನು ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು ಇದರ ಅಧ್ಯಕ್ಷ ಅಶೋಕ್ ಮೊಯ್ಲಿ ಅಧ್ಯಕ್ಷತೆ ವಹಿಸಿದ್ದರು.

ಡಾ. ಕೆ.ವಿ. ದೇವಾಡಿಗ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ.ಕೆ.ವಿ. ದೇವಾಡಿಗ, ಉದ್ಯಮಿ ಹಾಗೂ ಶತಮಾನೋತ್ಸವ ಆಚರಣೆ ಸಮಿತಿ ಗೌರವಾಧ್ಯಕ್ಷರಾದ ಹರೀಶ್ ಶೇರಿಗಾ‌ರ್, ಡಾ.ದೇವರಾಜ್ ಕೆ., ಶತಮಾನೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕರುಣಾಕರ ಎಂ.ಹೆಚ್‌., ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ, ಕುವೆಂಪು ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಪ್ರೊ. ಡಾ. ಬಿ.ಎಸ್. ಶೇರಿಗಾ‌ರ್, ವಿಶ್ವ ದೇವಾಡಿಗ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ್, ಶ್ರೀ ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್ ಬಾರ್ಕೂರು ಇದರ ಅಧ್ಯಕ್ಷ ಅಣ್ಣಯ್ಯ ಬಿ. ಶೇರಿಗಾ‌ರ್, ದೇವಾಡಿಗ ಸಂಘ ಮುಂಬೈ ಅಧ್ಯಕ್ಷ ರವಿ ಎಸ್. ದೇವಾಡಿಗ, ಮಂಗಳ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಕೆ.ಜೆ. ದೇವಾಡಿಗ, ದುಬೈ ಉದ್ಯಮಿ ನಾರಾಯಣ್ ಎಂ. ದೇವಾಡಿಗ, ದುಬೈ ದೇವಾಡಿಗ ಸಂಘದ ಅಧ್ಯಕ್ಷ ದಿನೇಶ್ ಕುಮಾರ್ ದೇವಾಡಿಗ, ಕರ್ನಾಟಕ ಪಾಲಿಟೆಕ್ನಿಕ್‌ ಮಂಗಳೂರು‌ ಇಲ್ಲಿನ ನಿವೃತ್ತ ಪ್ರಾಂಶುಪಾಲ ಬಾಬು ದೇವಾಡಿಗ ಆಂಬ್ಲಮೊಗರು, ಆಲ್ ಅಮೆರಿಕನ್ ತುಳು ಅಸೋಸಿಯೇಷನ್‌ (ಎಎಟಿಎ) ಸ್ಥಾಪಕ ಅಧ್ಯಕ್ಷ ಭಾಸ್ಕರ್ ಶೇರಿಗಾರ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಟ್ರಸ್ಟಿ ಆಲೂರು ರಘುರಾಮ ದೇವಾಡಿಗ, ಎಲ್.ಜಿ. ಫೌಂಡೇಶನ್ ಅಧ್ಯಕ್ಷ ನಾಗರಾಜ್‌ ದೇವಾಡಿಗ ಪಡುಕೋಣೆ, ಉದ್ಯಮಿ ಸುರೇಶ್ ಚಂದಪ್ಪ ದೇವಾಡಿಗ ದುಬೈ, ಸಾಯಿ ನಿಧಿ ಗ್ರೂಪ್ ಆಫ್ ಹೋಟೆಲ್ಸ್ ಮುಂಬೈನ ಶೇಖ‌ರ್ ದೇವಾಡಿಗ ಮೊದಲಾದವರಿದ್ದರು.

ಸಹನಾ ಮತ್ತು ತಂಡದಿಂದ ಪ್ರಾರ್ಥನೆ ನಡೆಯಿತು. ಪ್ರಧಾನ ಕಾರ್ಯದರ್ಶಿ ವೀಣಾ ಗಣೇಶ್ ಸ್ವಾಗತಿಸಿದರು. ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಕೋಶಾಧಿಕಾರಿ ಗೀತಾ ವಿ. ಕಲ್ಯಾಣಪುರ್ ವಂದಿಸಿದರು. ಶ್ರೀನಿವಾಸ ದೇವಾಡಿಗ ಮತ್ತು ಯಶಸ್ವಿನಿ ಮರೋಳಿ ಕಾರ್ಯಕ್ರಮ ನಿರೂಪಿಸಿದರು.

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)