ಮನಸೂರೆಗೊಳಿಸಿದ ಉಚ್ಚಿಲ ‘ದಸರಾ ನೃತ್ಯೋತ್ಸವ’: ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಉಡುಪಿಯ ಎಕ್ಸ್‌ಟ್ರೀಮ್ ಡಾನ್ಸ್ ಅಕಾಡೆಮಿಗೆ ಪ್ರಶಸ್ತಿ

Photo: Sachin, Ucchila

ಉಚ್ಚಿಲ: ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾ ಮಹೋತ್ಸವ–2026ರ ಅಂಗವಾಗಿ ರವಿವಾರ ರಾತ್ರಿ ಆಯೋಜಿಸಲಾದ ‘ದಸರಾ ನೃತ್ಯೋತ್ಸವ’ ರಾಜ್ಯಮಟ್ಟದ ಆಹ್ವಾನಿತ ತಂಡಗಳ ನೃತ್ಯ ಸ್ಪರ್ಧೆ ಪ್ರೇಕ್ಷಕರ ಮನಸೂರೆಗೊಳಿಸಿತು. ವಿವಿಧ ತಂಡಗಳ ಕಲಾವಿದರು ತಮ್ಮ ಅದ್ಭುತ ನೃತ್ಯಪ್ರತಿಭೆ, ಲಯಬದ್ಧ ಹೆಜ್ಜೆಗಳು ಹಾಗೂ ಆಕರ್ಷಕ ಪ್ರದರ್ಶನಗಳ ಮೂಲಕ ನೆರೆದಿದ್ದವರನ್ನು ರಂಜಿಸಿದರು.







ಸ್ಪರ್ಧೆಯಲ್ಲಿ ಹಲವು ತಂಡಗಳು ಭಾಗವಹಿಸಿದ್ದು, ಪ್ರಥಮ ಸ್ಥಾನ (Winners): ಎಕ್ಸ್‌ಟ್ರೀಮ್ ಡಾನ್ಸ್ ಅಕಾಡೆಮಿ, ಉಡುಪಿ,  ದ್ವಿತೀಯ ಸ್ಥಾನ (1st Runner-Up): ಸ್ಟೆಪ್ ಅಂಡ್ ಸ್ಟೈಲ್ ಡಾನ್ಸ್ ಕ್ರೂ, ಸಾಸ್ತಾನ, ತೃತೀಯ ಸ್ಥಾನ (2nd Runner-Up): ಡ್ಯಾನ್ಸಿಂಗ್ ಸ್ಟಾರ್ಸ್ ಡಾನ್ಸ್ ಸ್ಟುಡಿಯೋ, ಎಡಪದವು, ಮಂಗಳೂರು ಹಾಗು ಚತುರ್ಥ ಸ್ಥಾನ (3rd Runner-Up): ಎ.ಎಂ.ಡಿ.ಎಸ್. ಡಾನ್ಸ್ ಸ್ಟುಡಿಯೋ, ಬೆಂಗಳೂರುಯಂದ ಪಡೆದುಕೊಂಡಿತು. 

ಬಹುಮಾನ ವಿತರಣಾ ಸಮಾರಂಭದಲ್ಲಿ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್‌, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಉಡುಪಿ-ಉಚ್ಚಿಲ ದಸರಾ ಸಮಿತಿಯ ಅಧ್ಯಕ್ಷ ವಿನಯ ಕರ್ಕೇರ, ಮೋಹನ್ ಬೇಂಗ್ರೆ, ಗಿರಿಧರ ಸುವರ್ಣ, ಮನೋಜ್ ಕಾಂಚನ್, ಶರಣ್ ಕುಮಾರ್ ಮಟ್ಟು, ಸತೀಶ್ ಕುಂದರ್ ಮಲ್ಪೆ, ರತ್ನಾಕರ ಸಾಲ್ಯಾನ್ ಮಲ್ಪೆ, ಸ್ಪರ್ಧೆಯ ತೀರ್ಪುಗಾರರಾಗಿ ಸಹನಾ ಚೇತನ್, ಅರುಣ್ ರಾಜ್ ಶೆಟ್ಟಿ, ರವಿ ಸೂರ್ಯಕಾಂತ್ ಶೇಟ್ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.