
'ಯಾಹೂ' ಎಂದು ಕುಣಿಯುತ್ತಿದ್ದ ನೇತನ್ಯಾಹುವಿಗೆ 'ಅಯ್ಯಯ್ಯೋ' ಮಾಡಿಸಿದ ಇರಾನ್!
ಕಂಡಕಂಡ ದೇಶಗಳ ಮೇಲೆರಗಿ ಹೋಗಿ ಬಾಂಬ್ ಹಾಕುವ ಚಾಳಿಯನ್ನು ರೂಢಿ ಮಾಡಿಕೊಂಡಿರುವ ರಾಕ್ಷಸಿ ದೇಶ ಇಸ್ರೇಲ್ ಇರಾನ್ ಮೇಲೂ ದಾಳಿ ಮಾಡಿ ಗಿಟ್ಟಿಸಿಕೊಳ್ಳಬಹುದು ಎಂಬ ಭ್ರಮೆಯಲ್ಲಿತ್ತು. ಇರಾನ್ ಅನ್ನು ಇನ್ನೊಂದು ಗಝಾ ಮಾಡಿಯೇ ತೀರುವೆ ಎಂಬ ಭ್ರಮೆಯಲ್ಲಿತ್ತು. ಈಗ ದುರಹಂಕಾರಿ ಇಸ್ರೇಲ್ ಮತ್ತು ಅದರ ತಿಕ್ಕಲು ಗೆಳೆಯ ಅಮೇರಿಕದ ಭ್ರಮೆ ಕಳಚಿ ಬಿದ್ದಿದೆ. ಇರಾನ್ ಮಿಲಿಟರಿ ಇಸ್ರೇಲ್ ಮತ್ತು ಅಮೇರಿಕ ಮುಟ್ಟಿನೋಡಿಕೊಳ್ಳುವಂತೆ ರೊಚ್ಚಿಗೆದ್ದು ಪ್ರತೀಕಾರ ನಡೆಸಿದೆ.
ಇಸ್ರೇಲ್ ದೇಶ ಈ ಹಿಂದೆ ಯಾರಿಂದಲೂ ಇಷ್ಟು ಭಯಪಟ್ಟಿರಲಿಲ್ಲ. ಇಸ್ರೇಲ್ನಲ್ಲಿ ಅಂತ ಭೀತಿಯನ್ನು ಇರಾನ್ ಹುಟ್ಟಿಸಿದೆ. ಇರಾನ್ನ ಕರಾರುವಾಕ್ಕಾದ ದಾಳಿ ರಾಜಧಾನಿ ಟೆಲ್ ಅವೀವ್ ಮಾತ್ರವಲ್ಲದೆ ಇಸ್ರೇಲ್ನ ಪ್ರಮುಖ ನಗರಗಳನ್ನು ನಡುಗಿಸಿದೆ. ಎಷ್ಟು ಹಾನಿಯಾಗಿದೆ ಎಂದರೆ ಇಸ್ರೇಲ್ ಈ ಹಾನಿಯನ್ನು ಹೊರಜಗತ್ತಿಗೆ ತೋರಿಸದಂತೆ ಮಾಧ್ಯಮಗಳನ್ನು ದೂರ ಇಟ್ಟಿದೆ. ಆದರೂ ಅಲ್ಲೊಂದು ಇಲ್ಲೊಂದು ವಿಡಿಯೊಗಳು ಇಸ್ರೇಲ್ಗೆ ಆಗಿರುವ ಹಾನಿ ಎಷ್ಟು ಅಗಾಧವಾಗಿದೆ ಎಂಬುದನ್ನು ತೋರಿಸುತ್ತಿವೆ.
ಇರಾನ್ ಇಸ್ರೇಲ್ನ ದುರಹಂಕಾರಿ ನೇತನ್ಯಾಹುವಿನ ಬೀಜ ಬಾಯಿಗೆ ಬರುವಂತೆ ಹೊಡೆತ ನೀಡಿದೆ. ಅಮೇರಿಕ ತನ್ನ ಮೇಲೆ ಮಾಡಿದ ದಾಳಿಗೆ ಪ್ರತೀಕಾರವಾಗಿ ಕತರ್, ಇರಾನ್ನ ಅಮೇರಿಕದ ಬೃಹತ್ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದೆ. ತನ್ನ ತಂಟೆಗೆ ಬಂದರೆ ತಾನು ಸುಮ್ಮನೆ ಇರುವುದಿಲ್ಲ ಎಂದು ಇರಾನ್ ಮತ್ತೆಮತ್ತೆ ಸೂಚನೆ ನೀಡುತ್ತಿದೆ.
ಇರಾನ್ ಇಲ್ಲಿಗೆ ನಿಲ್ಲುವುದಿಲ್ಲ, ಇನ್ನಷ್ಟು ಹಾನಿ, ಸಾವು ನೋವು ಖಚಿತ ಎಂದು ನೇತನ್ಯಾಹುಗೂ, ಟ್ರಂಪ್ಗೂ ಗೊತ್ತಾಗಿದೆ. ಈಗ ಇಸ್ರೇಲ್ ಮಂಡಿಯೂರುತ್ತಿದೆ. ಇರಾನ್ ಜೊತೆ ಯುದ್ಧವಿರಾಮ ಬೇಕು ಎಂದು ಅಂಗಲಾಚುತ್ತಿದೆ. ಟ್ರಂಪ್ ಇರಾನ್-ಇಸ್ರೇಲ್ ನಡುವೆ ಈ ಕ್ಷಣದಿಂದ ಯುದ್ಧ ವಿರಾಮ ಜಾರಿಗೆ ಬಂದಿದೆ ಎಂದು ಘೋಷಿಸಿದರೂ ಇರಾನ್ ಅದಕ್ಕೆ ಒಪ್ಪಿಲ್ಲ. ಇಸ್ರೇಲ್ನ ವಾಯು ದಾಳಿಗಳು ನಿಂತರೆ ಮಾತ್ರ ತಾನು ಯುದ್ಧವಿರಾಮವನ್ನು ಪರಿಗಣಿಸಬಹುದು ಎಂದು ಸ್ಪಷ್ಟವಾಗಿ ಹೇಳಿದೆ.
ಇಂದೇ ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಜಾರಿಗೆ ಬರಬಹುದು. ಆದರೆ ಇಸ್ರೇಲ್ನ ದುರಹಂಕಾರಕ್ಕೆ ಇರಾನ್ ತಕ್ಕ ಬುದ್ದಿ ಕಲಿಸಿದೆ. ಇಸ್ರೇಲ್ನ ಭ್ರಮೆಗಳು ಕಳಚಿಬಿದ್ದಿವೆ. ಇರಾನ್ ಒಂದು ಹಂತದ ಗೆಲುವನ್ನು ಈಗಾಗಲೇ ಸಾಧಿಸಿದೆ. ದೊಡ್ಡಣ್ಣ ಅಮೇರಿಕದ ಪ್ರತ್ಯಕ್ಷ ಬೆಂಬಲವಿದ್ದರೂ ಇಸ್ರೇಲ್ ಇರಾನ್ನ ಪೆಟ್ಟಿಗೆ ನಲುಗಿದೆ.
ಈಗ ಆಗಬೇಕಾದ ಇನ್ನೊಂದು ತುರ್ತು ಕೆಲಸ ಗಝಾವನ್ನು ಸಂಪೂರ್ಣ ನಿರ್ನಾಮ ಮಾಡಿ ಫಲೇಸ್ತೀನಿಯರ ಸಂತತಿಯನ್ನೇ ಸರ್ವನಾಶ ಮಾಡುತ್ತಿರುವ ಇಸ್ರೇಲ್ನ ಮೇಲೆ ಒತ್ತಡ, ದಿಗ್ಬಂಧನಗಳ ಮೂಲಕ ಗಝಾದ ಮೇಲಿನ ಇಸ್ರೇಲ್ನ ರಾಕ್ಷಸೀ ದಾಳಿಯನ್ನು ನಿಲ್ಲಿಸಲು ಅಂತರಾಷ್ಟ್ರೀಯ ಸಮುದಾಯ ಶ್ರಮಿಸುವುದು.
ಇಸ್ರೇಲ್ ಇರಾನ್ ಮೇಲೆ ದಾಳಿ ಶುರು ಮಾಡಿದಾಗ "ಇಸ್ರೇಲ್ ನ ರಾಕ್ಷಸೀ ಹುಚ್ಚಾಟ ಇಸ್ರೇಲ್ ಅನ್ನೇ ಬಲಿತೆಗೆದುಕೊಳ್ಳುವ ದಿನಗಳು ದೂರವಿಲ್ಲ" ಎಂದು ನಾನು ಕೆಲದಿನಗಳ ಹಿಂದೆ ಪೋಸ್ಟ್ ಹಾಕಿದ್ದೆ. ಕೆಲವರು ಅದನ್ನು "ಓಹ್ ಭ್ರಮೆ" ಎಂದು ಗೇಲಿ ಮಾಡಿದ್ದರು. ಈಗ ಅವರ ಭ್ರಮೆಯೂ ಕಳಚಿದೆ ಅಂದುಕೊಂಡಿದ್ದೇನೆ.
- ಶಶಿಧರ ಹೆಮ್ಮಾಡಿ(ಪತ್ರಕರ್ತರು)