ಉತ್ತರಾಖಂಡದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಸತತ 3 ಬಾರಿ ಭೂಕಂಪ: ಭಯಭೀತರಾಗಿ ಮನೆಯಿಂದ ಓಡಿಬಂದ ಜನರು!

ಉತ್ತರಾಖಂಡದಲ್ಲಿ ಕೆಲವೇ ನಿಮಿಷಗಳ ಅಂತರದಲ್ಲಿ ಸತತ 3 ಬಾರಿ ಭೂಕಂಪ: ಭಯಭೀತರಾಗಿ ಮನೆಯಿಂದ ಓಡಿಬಂದ ಜನರು!

ಉತ್ತರಕಾಶಿ: ನಿನ್ನೆ ತಡರಾತ್ರಿ ಉತ್ತರಾಖಂಡದಲ್ಲಿ ಸತತ 3 ಬಾರಿ ಭೂಮಿ ಕಂಪಿಸಿದ್ದು, ಇಲ್ಲಿನ ಜನ ಮನೆಯಿಂದ ಹೊರಗೆ ಓಡಿಬಂದ ಘಟನೆ ವರದಿಯಾಗಿದೆ.

ದೈವನಾಡು ಉತ್ತರಾಖಂಡದ ಉತ್ತರಕಾಶಿಯಲ್ಲಿ ಕೇವಲ 21 ನಿಮಿಷಗಳ ಅಂತರದಲ್ಲಿ 3 ಬಾರಿ ಭೂಮಿ ಕಂಪಿಸಿದ್ದು, ಇಲ್ಲಿನ ಜನರು ಭಯಭೀತರಾಗಿದ್ದಾರೆ. ಶನಿವಾರ ತಡರಾತ್ರಿ ಒಂದರ ಹಿಂದೆ ಒಂದರಂತೆ 3 ಬಾರಿ ಭೂಮಿ ಕಂಪಿಸಿದ್ದು, ಭ್ಯಭೀತರಾದ ಇಲ್ಲಿನ ಜನರು ತಮ್ಮ ಮನೆಯಿಂದ ಹೊರಬಂದರು. ಇಲ್ಲಿ ಸಂಭವಿಸಿರುವ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 2.5ರಷ್ಟಿತ್ತು. 3 ಬಾರಿ ಕಂಪನ ಸಂಭವಿಸಿದ್ದರೂ ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ. 

ನಿನ್ನೆ ತಡರಾತ್ರಿ ಉತ್ತರಕಾಶಿಯಲ್ಲಿ ತಡರಾತ್ರಿ 12:40ಕ್ಕೆ ಇದ್ದಕ್ಕಿದ್ದಂತೆ ಪಾತ್ರೆಗಳು ಅಲುಗಾಡುವ ಸದ್ದು, ಕಿಟಕಿ ಗಾಜುಗಳ ಸದ್ದು ಕೇಳಿಸಿತು. ಇದಾದ ಕೆಲವೇ ನಿಮಿಷದಲ್ಲಿ ಅಂದರೆ 12:45 ಕ್ಕೆ ಹಾಗು 1:01 ಕ್ಕೆ ಮೂರನೇ ಕಂಪನ ಸಂಭವಿಸಿತು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article