ಬಿಜೆಪಿ ಪಕ್ಷವು ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ 5 ವರ್ಷಗಳಲ್ಲಿ 5 ಸರ್ಕಾರಗಳನ್ನು  ಉರುಳಿಸಿದೆ

ಬಿಜೆಪಿ ಪಕ್ಷವು ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ 5 ವರ್ಷಗಳಲ್ಲಿ 5 ಸರ್ಕಾರಗಳನ್ನು ಉರುಳಿಸಿದೆ

ನವದೆಹಲಿ:  ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್,  ಬಿಜೆಪಿ ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ ಸೇರಿದಂತೆ 5 ವರ್ಷಗಳಲ್ಲಿ 5 ಸರ್ಕಾರಗಳನ್ನು  ಉರುಳಿಸಿದೆ.  ಕ್ರಮ ಕೈಗೊಳ್ಳುವುದನ್ನು ಸುಪ್ರೀಂ ಕೋರ್ಟ್ ಗೆ ಬಿಡಲಾಗಿದೆ ಎಂದು ಹೇಳಿದ್ದಾರೆ. 

ಎನ್ ಸಿಪಿ ನಾಯಕ ಅಜಿತ್ ಪವಾರ್ 8 ಶಾಸಕರೊಂದಿಗೆ ಏಕನಾಥ್ ಶಿಂಧೆ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಬೆಳವಣಿಗೆ ಹಿನ್ನೆಲೆಯಲ್ಲಿ ಖ್ಯಾತ ವಕೀಲರೂ ಆಗಿರುವ ಸಿಬಲ್ ಈ ಪ್ರತಿಕ್ರಿಯೆ ನೀಡಿದ್ದಾರೆ. 

ದಿಢೀರ್ ಬೆಳವಣಿಗೆಯಲ್ಲಿ ಭಾನುವಾರ ಎನ್ ಸಿಪಿ ನಾಯಕ ಅಜಿತ್ ಪವಾರ್, ಪಕ್ಷದ ವಿರುದ್ಧ ಬಂಡಾಯ ಸಾರಿ 8 ಶಾಸಕರೊಂದಿಗೆ ಬಿಜೆಪಿ-ಶಿವಸೇನೆ (ಶಿಂಧೆ ಬಣ) ಸರ್ಕಾರವನ್ನು ಸೇರಿ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಸಿಬಲ್, "ಬಿಜೆಪಿ: ಅಧಿಕಾರದ ಪ್ರಚೋದನೆಯಿಂದ ಉತ್ತರಾಖಂಡ (2016); ಅರುಣಾಚಲ ಪ್ರದೇಶ (2016); ಕರ್ನಾಟಕ (2019); ಮಧ್ಯಪ್ರದೇಶ (2020); ಮಹಾರಾಷ್ಟ್ರ (2022) ಗಳಲ್ಲಿ ಚುನಾಯಿತ ಸರ್ಕಾರಗಳನ್ನು ಕೆಡವಿದೆ. ಇದಕ್ಕೆ ಕಾನೂನು ಒಪ್ಪುತ್ತಾ? ಓವರ್ ಟು ಸುಪ್ರೀಂ ಕೋರ್ಟ್ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಬೆಳವಣಿಗೆಯನ್ನು ಕಪಿಲ್ ಸಿಬಲ್, ಮೊದಲು ಭ್ರಷ್ಟಾಚಾರಿಗಳ ಮೇಲೆ ದಾಳಿ ನಡೆಸಿ ಆ ನಂತರ ಅವರನ್ನೇ ಅಪ್ಪಿಕೊಳ್ಳುವುದು ಎಂದು ವ್ಯಂಗ್ಯವಾಡಿದ್ದರು.

Ads on article

Advertise in articles 1

advertising articles 2

Advertise under the article