'ದಿ ಕೇರಳ ಸ್ಟೋರಿ'  ಸಿನಿಮಾ ನೋಡಿದ್ರೆ ಕಾಂಗ್ರೆಸ್ ಸರ್ಕಾರ ಖಂಡಿತಾ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ: ಈಶ್ವರಪ್ಪ

'ದಿ ಕೇರಳ ಸ್ಟೋರಿ' ಸಿನಿಮಾ ನೋಡಿದ್ರೆ ಕಾಂಗ್ರೆಸ್ ಸರ್ಕಾರ ಖಂಡಿತಾ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ: ಈಶ್ವರಪ್ಪ

ಬೆಂಗಳೂರು: ದಿ ಕೇರಳ ಸ್ಟೋರಿ  ಸಿನಿಮಾ ನೋಡಿದ್ರೆ ಕಾಂಗ್ರೆಸ್ ಸರ್ಕಾರ ಖಂಡಿತಾ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ.

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ಗ್ಯಾರಂಟಿ ವಿರೋಧಿ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದ ಅವರು,  ಬೇಕಿದ್ರೆ ಕಾಂಗ್ರೆಸ್ ಮಂತ್ರಿಗಳು ಬರಲಿ. ನಾನೇ ಕರೆದುಕೊಂಡು ಹೋಗಿ ಇಡೀ ಮಂತ್ರಿ ಮಂಡಲಕ್ಕೆ ಕೇರಳ ಸ್ಟೋರಿ ಸಿನಿಮಾವನ್ನ ಉಚಿತವಾಗಿ ತೋರಿಸ್ತೀನಿ ಬನ್ನಿ. ಕಾಂಗ್ರೆಸ್‌ನವರು ಈ ಸಿನಿಮಾ ನೋಡಿದ್ರೆ ಮತಾಂತರ ನಿಷೇಧ ಕಾಯ್ದೆಯನ್ನ ತಿದ್ದುಪಡಿ ಮಾಡಲ್ಲ ಎಂದಿದ್ದಾರೆ.

ಅಲ್ಲದೇ ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಿ ನೋಡೋಣ ಅಂತಾ ಸವಾಲ್ ಹಾಕಿದ್ದಾರೆ. ಗೋವು ತಾಯಿ ಸಮಾನ, ಮೊದಲು ನಿಮ್ಮ ಮನೆಗೆ ಹೋಗಿ ನಿಮ್ಮ ತಾಯಿ, ಅಕ್ಕ-ತಂಗಿಗೆ ಕೇಳಿ. ಗೋ ಹತ್ಯೆ ನಿಷೇಧ ಮಾಡ್ತೀವಿ ಅಂದ್ರೆ ನಿಮ್ಮನ್ನ ಮನೆಬಿಟ್ಟು ಓಡಿಸ್ತಾರೆ. ಮೋಸ ಮಾಡಿದ ಸರ್ಕಾರ ಬಹಳ ದಿನ ಇರಲ್ಲ ಅನ್ನೋದಕ್ಕೆ ಮಹಾರಾಷ್ಟ್ರ ಸಾಕ್ಷಿ. ಮಹಾರಾಷ್ಟ್ರದಂತೆಯೇ ಕರ್ನಾಟಕದಲ್ಲಿಯೂ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

Ads on article

Advertise in articles 1

advertising articles 2

Advertise under the article