
ಉಚ್ಚಿಲದಲ್ಲಿ ಬೈಕ್ ಡಿಕ್ಕಿ; ಪಾದಚಾರಿ ಮೃತ್ಯು: ಬೈಕ್'ನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರ
ಉಚ್ಚಿಲ: ಉಚ್ಚಿಲ ಪೇಟೆಯ ಷ್ಟ್ರೀಯ ಹೆದ್ದಾರಿಯ ಸ್ಪೈಸಿ ಹೋಟೆಲಿನ ಮುಂದೆ ಬೈಕೊಂದು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಮೃತ ವ್ಯಕ್ತಿಯನ್ನು ಶಂಕರ್ ಶೆಟ್ಟಿ ಕಾಪು ಎಂದು ಗುರುತಿಸಲಾಗಿದೆ. ಬೈಕ್'ನಲ್ಲಿದ್ದವರನ್ನು ಮಂಗಳೂರಿನ ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳಾದ ಮಂಗಳೂರಿನ ದರ್ಶನ್ ರಾಜ್ ಹಾಗು ನತಾಶಾ ಸನಿಲ್ ಎಂದು ಗುರುತಿಸಲಾಗಿದೆ. ಇಬರಿಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಮಂಗಳೂರಿನಿಂದ ಉಡುಪಿ ಕಡೆ ಹೋಗುತ್ತಿದ್ದ ಬೈಕ್, ಉಚ್ಚಿಲ ಪೇಟೆಯ ಸ್ಪೈಸಿ ಹೋಟೆಲಿನ ಮುಂದೆ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಪರಿಚಿತ ವ್ಯಕ್ತಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಉಚ್ಚಿಲದ ಯುವಕರ ತಂಡ ಗಾಯಾಳುಗಳನ್ನು ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಲು ಸಹಕರಿಸಿದರು.
ಉಚ್ಚಿಲ ಹಾಗು ಮೂಳೂರಿನ SDPI ಅಂಬ್ಯುಲೆನ್ಸ್ ಮೂಲಕ ಮೃತ ಹಾಗು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು. ಉಚ್ಚಿಲ SDPI ಅಂಬ್ಯುಲೆನ್ಸ್ ಚಾಲಕ ಕೆ.ಎಂ.ಸಿರಾಜ್, ಮೂಳೂರು SDPI ಅಂಬ್ಯುಲೆನ್ಸ್ ಚಾಲಕ ಹಮೀದ್ ಉಚ್ಚಿಲ, ಸಾಮಾಜಿಕ ಕಾರ್ಯಕರ್ತ ಉಚ್ಚಿಲದ ಜಲಾಲುದ್ದೀನ್(ಜಲ್ಲು ಫ್ರೂಟ್ಸ್), ಆಸಿಫ್ ಮೂಳೂರು, ಖಲಂದರ್ ಮೂಳೂರು, ಹನೀಫ್ ಮೂಳೂರು ಸೇರಿದಂತೆ ಸ್ಥಳೀಯರು ಮೃತದೇಹವನ್ನು ಹಾಗು ಗಾಯಾಳುಗಳನ್ನು ತಕ್ಷಣವೇ ಅಂಬ್ಯುಲೆನ್ಸ್ ಮೂಲಕ ಆಸ್ಪತೆರೆಗೆ ಸಾಗಿಸಲು ನೆರವಾದರು. ಯಾವುದೇ ಅಪಘಾತ ಸಂಭವಿಸಿದಾಗ ಉಚ್ಚಿಲದ ಯುವಕರು ಜೀವದ ಹಂಗು ತೊರೆದು ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಪ್ರದರ್ಶಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.