ಇತ್ತೀಚೆಗಷ್ಟೇ ತನ್ನಿಂದ ದೂರವಾಗಿದ್ದ ತನ್ನ ಮಾಜಿ ಆಪ್ತ ಸಹಾಯಕನ ಮೇಲೆ ಬಾವ ಹಾಗೂ ಬೆಂಬಲಿಗರಿಂದ ಹಲ್ಲೆ; ಆರೋಪ
ಮಂಗಳೂರು: ಇತ್ತೀಚೆಗಷ್ಟೇ ಬಾವ ಅವರ ಸೈದ್ದಾಂತಿಕ ನಿಲುವಿನ ವಿರುದ್ಧ ತನ್ನಿಂದ ದೂರವಾಗಿದ್ದ ಮಾಜಿ ಆಪ್ತ ಸಹಾಯಕ ನಿಝಾಮ್ ಎಂಬವನ ಮೇಲೆ ಬಾವ ಹಾಗೂ ತಂಡ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ವೇಳೆ ರಾತ್ರಿ ಪಾಳಿಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿ ಸ್ವತಃ ಅಭ್ಯರ್ಥಿಯೇ ಫೀಲ್ಡಿಗಿಳಿದು ಮತದಾರರಿಗೆ ದುಡ್ಡು ಹಂಚಲು ಮುಂದಾಗುತ್ತಿದ್ದಾಗ ಬಾವ ಅವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ಪಕ್ಷದ ಅಭ್ಯರ್ಥಿ ಮೊಹಿದೀನ್ ಬಾವ ಹಾಗೂ ತನ್ನ ಆಪ್ತರು ಮತದಾರರಿಗೆ ದುಡ್ಡು ಹಂಚಲು ಮುಂದಾದಾಗ ಗಸ್ತು ತಿರುಗುತ್ತಿದ್ದ ಚುನಾವಣಾ ಅಧಿಕಾರಿಗಳು ಹಾಗೂ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಜೊತೆಗೆ ಬಾವ ಮಾಜಿ ಆಪ್ತ ಸಹಾಯಕ ಕೂಡ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಾವ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ವೇಳೆ ಪೋಲಿಸರು ಸ್ಥಳಕ್ಕಾಗಮಿಸುವಂತೆ ಬಾವ ಪೋಲಿಸರ ಮೇಲೆಯೇ ರೇಗಾಡಿ ಫುಲ್ ಹೈಡ್ರಾಮ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರ ಬರಬೇಕಿದೆ.