ಮತ್ತೆ ಬಿಜೆಪಿಗೆ ಬಿಗ್ ಶಾಕ್; ಮತ್ತೊಂದು ವಿಕೆಟ್ ಪತನ: ನಾಳೆ ಕಾಂಗ್ರೆಸ್ ಸೇರ್ಪಡೆ

ಮತ್ತೆ ಬಿಜೆಪಿಗೆ ಬಿಗ್ ಶಾಕ್; ಮತ್ತೊಂದು ವಿಕೆಟ್ ಪತನ: ನಾಳೆ ಕಾಂಗ್ರೆಸ್ ಸೇರ್ಪಡೆ

ಚಾಮರಾಜನಗರ: ಈ ಬಾರಿಯ ವಿಧಾನಸಭೆ ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆಯೇ ಆಡಳಿತಾರೂಢ ಬಿಜೆಪಿಗೆ ಮೇಲಿಂದ ಮೇಲೆಗೆ ಶಾಕ್ ಸಿಗುತ್ತಲೇ ಇದ್ದು, ಹಳೆ ಮೈಸೂರು ಭಾಗದ ಮೇಲೆ ಕಣ್ಣಿಟ್ಟಿದ್ದ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದೆ.

ಈ ಭಾಗದಲ್ಲಿರುವ BJPಯ ನಾಯಕರು ಒಬ್ಬರಿಂದೊಬ್ಬರು ಪಕ್ಷ ತೊರೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ವಿಧಾನ ಪರಿಷತ್ ಸದಸ್ಯ ಸಂದೇಶ ನಾಗರಾಜ್ BJP ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಬೆನ್ನಲ್ಲೇ ಇದೀಗ ಚಾಮರಾಜನಗರದಲ್ಲಿ ಮತ್ತೋರ್ವ ಮಾಜಿ ಶಾಸಕ BJP ಪಕ್ಷ ತೊರೆದು ಕೈ(ಕಾಂಗ್ರೆಸ್) ಹಿಡಿಯಲು ಮುಂದಾಗಿದ್ದಾರೆ.

ರಾಜ್ಯದ ಹಲವೆಡೆ ಬಿಜೆಪಿ ನಾಯಕರು ಕಾಂಗ್ರೆಸಿನತ್ತ ಬರುಯುತ್ತಿರುವ ಬೆನ್ನಲ್ಲೇ, ಕೊಳ್ಳೇಗಾಲ ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ BJPಗೆ ಗುಡ್‌ಬೈ ಹೇಳಿದ್ದಾರೆ. BJP ಪಕ್ಷದ ಪ್ರಾಥಾಮಿಕ ಸದಸ್ಯ ಸ್ಥಾನಕ್ಕೆ ಹಾಗೂ ರಾಜ್ಯ SC ಮೋರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಮಂಗಳವಾರ ಬೆಂಗಳೂರು KPCC ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. 

ಈ ಬಗ್ಗೆ ಪ್ರತಿಕ್ರಿಯಿಸಿರುವ ನಂಜುಂಡಸ್ವಾಮಿ, ಈಗ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣವಿದೆ. ಬಿಜೆಪಿಯಿಂದಾಗಿ ನನಗೆ ಹಾಗೂ ನನ್ನ ಬೆಂಬಲಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಬಿಜೆಪಿ ಪಕ್ಷದಿಂದ ಬೇಸತ್ತು ರಾಜೀನಾಮೆ ನೀಡಿದ್ದೇನೆ. ನಾನು ಯಾವುದೇ ಷರತ್ತಿಲ್ಲದೆ ನಾಳೆ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

Ads on article

Advertise in articles 1

advertising articles 2

Advertise under the article