ಕುಕ್ಕಾಜೆ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ನೂತನ ಆಡಳಿತ ಕಮಿಟಿ ಅಸ್ತಿತ್ವಕ್ಕೆ

ಕುಕ್ಕಾಜೆ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ನೂತನ ಆಡಳಿತ ಕಮಿಟಿ ಅಸ್ತಿತ್ವಕ್ಕೆ

ಮಂಗಳೂರು:  ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆಯ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ನೂತನ ಆಡಳಿತ ಕಮಿಟಿ ಅಸ್ತಿತ್ವಕ್ಕೆ ಬಂದಿದೆ. 

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯ ಆಡಳಿತ ಕಮಿಟಿಯ ಚುನಾವಣೆಯು ಉಚ್ಚ ನ್ಯಾಯಾಲಯದ ಆದೇಶದಂತೆ ದಿನಾಂಕ 25-01-2025 ರಂದು ಕುಕ್ಕಾಜೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆದಿತ್ತು. ಈ ವೇಳೆ ಇತರ ಜಮಾಅತಿನ ಸದಸ್ಯರು ಕುಕ್ಕಾಜೆ ಜಮಾಅತಿನಲ್ಲಿ ಚುನಾವಣೆ ಉದ್ದೇಶಕ್ಕೆ ಮತದಾನಕ್ಕೆ ಸದಸ್ಯತ್ವವನ್ನು ಪಡೆದಿದ್ದು, ಅವರಿಗೆ ಮತದಾನ ಮಾಡಲು ಅವಕಾಶ ಇಲ್ಲವೆಂದು ಚುನಾವಣಾ ಅಧಿಕಾರಿಗಳು ಅವರ ಹೆಸರು ಮತದಾರ ಪಟ್ಟಿಯಿಂದ ಕೈಬಿಟ್ಟಿದ್ದರು. ಇದರಿಂದಾಗಿ ಜಮಾಅತಿನ ಕೆಲವೊಂದು ವ್ಯಕ್ತಿಗಳು ಸದ್ರಿ ಚುನಾವಣೆಯನ್ನು ಸ್ಥಗಿತಗೊಳಿಸಬೇಕೆಂದು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದರಿಂದ  ಚುನಾವಣೆ ದಿವಸದಂದು ಫಲಿತಾಂಶ ಘೋಷಣೆ ಮಾಡಬಾರದೆಂದು ಮಾನ್ಯ ಉಚ್ಚ ನ್ಯಾಯಾಲಯದಿಂದ ಆದೇಶವಾಗಿತ್ತು. 

ಅದರಂತೆ ವಕ್ಸ್ ಅಧಿಕಾರಿಗಳು ಪಲಿತಾಂಶವನ್ನು ತಡೆಯಿಡಿದಿದ್ದು, ಬಳಿಕ ಉಚ್ಚನ್ಯಾಯಾಲಯದಲ್ಲಿ ವಾದ ಪ್ರತಿವಾದಗಳು ನಡೆದು ಅಂತಿಮವಾಗಿ ದಿನಾಂಕ 12-02-2026 ರಂದು ಉಚ್ಚ ನ್ಯಾಯಾಲಯದಲ್ಲಿ ಸದ್ರಿ ಚುನಾವಣೆ ಫಲಿತಾಂಶ ಘೋಷಿಸುವಂತೆ ತೀರ್ಪು ಬಂದಿದೆ. 

ಅದರಂತೆ ದಿನಾಂಕ 10-03-2026 ರಂದು ಜಿಲ್ಲಾ ವಕ್ಸ್ ಅಧಿಕಾರಿಗಳು ಮತ್ತು ಜುಮ್ಮಾ ಮಸೀದಿಯ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 25-01-2025 ರಂದು ನಡೆದ ಚುನಾವಣೆಯ 22 ಅಭ್ಯರ್ಥಿಗಳ ಫಲಿತಾಂಶವನ್ನು ಕುಕ್ಕಾಜೆ ಮದರಸ ಸಭಾಂಗಣದಲ್ಲಿ ಪ್ರಕಟಿಸಿದ್ದಾರೆ.

ಸದ್ರಿ ಪಲಿತಾಂಶದಲ್ಲಿ 11 ಅಭ್ಯರ್ಥಿಗಳು

1) ಮೊಹಿದಿನಬ್ಬ ಹಾಜಿ, 2) ಅಬ್ದುಲ್ ರಝಾಕ್ ಮಂಚಿ,  3) ಬದ್ರುದ್ದೀನ್, 4) ಅಹಮ್ಮದ್ ಬೈಲ್, 5) ಮೊಹಿದುಕುಂಞ ಕುರಿಯಪ್ಪಾಡಿ, 6) ಅಶ್ರಫ್ ನಾಡಾಜೆ, 7) ಮಹಮ್ಮದ್ ದರ್ಖಾಸು, 8) ಉಮ್ಮರ್ ಬಾಬುಕೋಡಿ, 9) ಮಹಮ್ಮದ್ ಪಂಜಿಕಲ್ಲು, 10) ಹಮೀದ್ ಬೈಲ್, 11) ಅನ್ಸಾರ್ ಅಝ್ಅರಿ. ಇವರು ಅತೀ ಹೆಚ್ಚು ಸುಮಾರು 500ಕ್ಕೂ ಅಧಿಕ ಮತವನ್ನು ಪಡೆದು ಚುನಾಯಿತಾಗಿದ್ದಾರೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ 11 ಮಂದಿ ಸದಸ್ಯರು ಮುಂದಿನ ಮೂರು ವರ್ಷಗಳ ಅವಧಿಗೆ ಮಸೀದಿಯ ಆಡಳಿತ ಕಮಿಟಿಯ ನೂತನ ಸದಸ್ಯರಾಗಿ ಅಧಿಕಾರ ವಹಿಸಿಕೊಂಡಿddaare.

Ads on article

Advertise in articles 1

advertising articles 2

Advertise under the article