ಪಿಯುಸಿ ಫಲಿತಾಂಶ; ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಮುಹಮ್ಮದ್ ಇಶಾನ್ ಹುಸೈನ್

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅದಮಾರು ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮುಹಮ್ಮದ್ ಇಶಾನ್ ಹುಸೈನ್ ವಿಜ್ಞಾನ ವಿಭಾಗದಲ್ಲಿ  562 (93.67%) ಅಂಕಗಳಿಸಿ ಅತ್ಯುನ್ನತ  ಶ್ರೇಣಿಯಲ್ಲಿ  ಉತ್ತೀರ್ಣರಾಗಿದ್ದಾರೆ. ಇವರು ಅಂತರ್ ರಾಷ್ಟ್ರೀಯ ಕರಾಟೆಪಟು ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ ಮತ್ತು ನಿಟ್ಟೆ ಕೈರಾಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶಾಹಿನ್ ದಂಪತಿಯ ಪುತ್ರರಾಗಿರುತ್ತಾರೆ.