ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ; ಯಾರೆಲ್ಲ ಅಧ್ಯಕ್ಷರಾಗಿದ್ದಾರೆ ನೋಡಿ..


ನವದೆಹಲಿ: ಡಿಕೆ ಶಿವಕುಮಾರ್‌ ಸರ್ಕಾರಕ್ಕೆ 100 ದಿನ ಪೂರ್ಣಗೊಂಡ ಬೆನ್ನಲ್ಲೇ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರ ನೇಮಕ ಮಾಡಿದೆ. ಎಐಸಿಸಿ(AICC) 35 ಮಂದಿ ಜಿಲ್ಲಾಧ್ಯಕ್ಷರ ನೇಮಕ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.

ಪಕ್ಷ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದ ‘ಸಂಘಟನಾ ಸೃಜನ್ ಅಭಿಯಾನ’ (Sangathan Srijan Abhiyan) ಅಡಿಯಲ್ಲಿ ಈ ಮಹತ್ವದ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಅಭಿಯಾನದ ಭಾಗವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಗೂ ನಿಯೋಜಿಸಲಾಗಿದ್ದ ಎಐಸಿಸಿ (AICC) ವೀಕ್ಷಕರು ಸ್ಥಳೀಯ ಮಟ್ಟದಲ್ಲಿ ಸಮಗ್ರ ಪರಿಶೀಲನೆ ನಡೆಸಿದ್ದರು.

ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖ ಭಾಗಿದಾರರೊಂದಿಗೆ ಸಮಾಲೋಚನೆ ನಡೆಸಿ ಸಿದ್ಧಪಡಿಸಲಾಗಿದ್ದ ವಿಸ್ತೃತ ವರದಿಗಳನ್ನು ಹೈಕಮಾಂಡ್‌ಗೆ ಸಲ್ಲಿಸಲಾಗಿತ್ತು. ಆ ವರದಿಗಳ ಆಧಾರದ ಮೇಲೆ ಪ್ರತಿ ಜಿಲ್ಲೆಯ ವೀಕ್ಷಕರು ಹಾಗೂ ಪಕ್ಷದ ಹಿರಿಯ ನಾಯಕರೊಂದಿಗೆ ಮುಖಾಮುಖಿ ಸಮಾಲೋಚನೆ ನಡೆಸಿದ ಬಳಿಕ, ಅಂತಿಮ ಪಟ್ಟಿಗೆ ಎಐಸಿಸಿ ಅಧ್ಯಕ್ಷರು ಅಂಕಿತ ಹಾಕಿದ್ದಾರೆ. 

ಜಿಲ್ಲಾ ಅಧ್ಯಕ್ಷರ ಪಟ್ಟಿ ಹೀಗಿದೆ... 

ಬೆಂಗಳೂರು ಉತ್ತರ: ಅಬ್ದುಲ್ ವಾಜಿದ್

ಬೆಂಗಳೂರು ದಕ್ಷಿಣ: ಒ. ಮಂಜುನಾಥ್

ಬೆಂಗಳೂರು ಪೂರ್ವ: ಡಿ. ಕೆ. ಮೋಹನ್ ಬಾಬು

ಬೆಂಗಳೂರು ಪಶ್ಚಿಮ: ಹನುಮಂತರಾಯಪ್ಪ

ಬೆಂಗಳೂರು ಸೆಂಟ್ರಲ್: ಜೆ. ಶರವಣನ್

ಬೆಂಗಳೂರು ಗ್ರಾಮಾಂತರ: ಸಿ. ಪ್ರಸನ್ನ ಕುಮಾರ್

ಚಿಕ್ಕೋಡಿ: ಲಕ್ಷ್ಮಣರಾವ್ ಚಿಂಗಳೆ

ಬೆಳಗಾವಿ ನಗರ: ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್ (ರಾಜಾಸಲೀಂ)

ಬೆಳಗಾವಿ ಗ್ರಾಮಾಂತರ: ಬಸವರಾಜ್ ಶೇಗಾವಿ

ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್

ಬಳ್ಳಾರಿ ಗ್ರಾಮಾಂತರ: ಕೆ. ಮಲ್ಲಿಕಾರ್ಜುನ

ಬೀದರ್: ಅಬ್ದುಲ್ ಮನ್ನಾನ್ ಸೇಠ್

ಚಾಮರಾಜನಗರ: ಜೆ. ಯೋಗೇಶ್

ಚಿಕ್ಕಮಗಳೂರು: ಹೆಚ್. ಪಿ. ಮಂಜೇಗೌಡ

ದಕ್ಷಿಣ ಕನ್ನಡ: ಪದ್ಮರಾಜ್ ಆರ್. ಪೂಜಾರಿ

ದಾವಣಗೆರೆ: ಇಬ್ರಾಹಿಂ ಖಲೀಲುಲ್ಲಾ

ಧಾರವಾಡ ಗ್ರಾಮಾಂತರ: ಚಂದ್ರಶೇಖರ್ ಜುಟ್ಟಲ್

ಗದಗ: ವಾಸಣ್ಣ ಕುರ್ಡಗಿ

ಕಲಬುರಗಿ: ಡಾ. ಕಿರಣ್ ಎ. ದೇಶಮುಖ್

ಹಾಸನ: ಶಶಿಧರ್ ಜಿ. ಬಿ.

ಹಾವೇರಿ: ಸಂಜೀವ್ ಕುಮಾರ್ ನೀರಲಗಿ

ಹುಬ್ಬಳ್ಳಿ-ಧಾರವಾಡ ನಗರ: ಸದಾನಂದ ವಿ. ದಂಗನವರ್

ಕೊಡಗು: ಧರ್ಮಜ ಉತ್ತಪ್ಪ

ಕೋಲಾರ: ಎನ್. ನಾರಾಯಣಸ್ವಾಮಿ

ಕೊಪ್ಪಳ: ಎಂ. ಮಲ್ಲಿಕಾರ್ಜುನ ನಾಗಪ್ಪ

ಮಂಡ್ಯ: ಕುಮಾರ್ ಕೊಪ್ಪ

ಮೈಸೂರು ನಗರ: ಆರ್. ಮೂರ್ತಿ

ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ

ರಾಯಚೂರು: ಕೆ. ಶಾಂತಪ್ಪ

ರಾಮನಗರ: ಸಿ. ಎನ್. ವೆಂಕಟೇಶ್

ಶಿವಮೊಗ್ಗ: ಹೆಚ್. ಸಿ. ಯೋಗೇಶ್

ಉಡುಪಿ: ಕಿಶನ್ ಕುಮಾರ್ ಹೆಗ್ಡೆ

ಉತ್ತರ ಕನ್ನಡ: ಗಜಾನನ ತಿಮ್ಮ ನಾಯ್ಕ್

ಯಾದಗಿರಿ: ಬಸರೆಡ್ಡಿ ಎಂ. ಪಾಟೀಲ್