ಅರ್ಕುಳ: ಅರ್ಕುಳ ರಹ್ಮಾನಿಯ ಜುಮ್ಮಾ ಮಸ್ಜಿದ್‌ನಲ್ಲಿ ಮಿಲಾದ್ ಪ್ರಯುಕ್ತ ‘ಇಶ್ಕೇ ರಸೂಲ್, ಮೊಹಬ್ಬತೇ ರಸೂಲ್’ ಎಂಬ ಅರ್ಥಪೂರ್ಣ ಧಾರ್ಮಿಕ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಖ್ಯಾತ ಪ್ರವಚನಕಾರ ಕುಕ್ಕಿಲ ದಾರಿಮಿ ಅವರು, ಪ್ರವಾದಿ ಮುಹಮ್ಮದ್ ﷺ ಅವರ ಆದರ್ಶ ಜೀವನ, ಪ್ರೀತಿ, ಸಹೋದರತ್ವ ಹಾಗೂ ಮಾನವೀಯತೆಯ ಸಂದೇಶಗಳ ಕುರಿತು ಮನಮುಟ್ಟುವ ರೀತಿಯಲ್ಲಿ ಮಾತನಾಡಿದರು.
ಈ ಅರ್ಥಪೂರ್ಣ ಕಾರ್ಯಕ್ರಮದ ವೇದಿಕೆಯಲ್ಲಿ ಮಸೀದಿಯ ಖತೀಬರಾದ ಹನೀಫ್ ದಾರಿಮಿ, ಅರ್ಕುಳ ರಹ್ಮಾನಿಯ ಜುಮ್ಮಾ ಮಸ್ಜಿದ್ ಅಧ್ಯಕ್ಷ ಅಬ್ದುಲ್ ಸತ್ತಾರ್, ಉಪಾಧ್ಯಕ್ಷ ಸಾಜಿದ್ ಒಡೆಯರ್, ಕಾರ್ಯದರ್ಶಿ ರಫೀಕ್ ಅರ್ಕುಳ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಮಿಲಾದ್ ಪ್ರಯುಕ್ತ ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಬಳಿಕ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿದಿನ ತಪ್ಪದೇ ಸುಬಹಿ ನಮಾಝ್ ಜಮಾಅತ್‌ನಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿ ಬಿಲಾಲ್ ಹಾಶೀರ್ ಅವರ ಶ್ರದ್ಧೆ ಮತ್ತು ಮಾದರಿ ನಡೆಗೆ ಮೆಚ್ಚುಗೆ ಸೂಚಿಸಿ, ಜಮಾಅತ್ ವತಿಯಿಂದ ಅವರಿಗೆ ಬೈಸಿಕಲ್ ಅನ್ನು ಉಡುಗೊರೆಯಾಗಿ ನೀಡಲಾಯಿತು.
ಕಾರ್ಯಕ್ರಮವು ಪ್ರವಾದಿ ಪ್ರೀತಿಯ ಸಂದೇಶವನ್ನು ಸಾರುವುದರ ಜೊತೆಗೆ ಮಕ್ಕಳಲ್ಲಿ ಧಾರ್ಮಿಕ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಅರ್ಥಪೂರ್ಣವಾಗಿ ನಡೆಯಿತು.
