ಡಾ.ಶೇಖ್ ವಹೀದ್ ದಾವೂದ್ ಫ್ಯಾಮಿಲಿ ಟ್ರಸ್ಟ್‌ನಿಂದ ಸ್ವಾತಂತ್ಯೋತ್ಸವ ವಿಶೇಷವಾಗಿ ಆಚರಣೆ


ಉಡುಪಿ: ಇಲ್ಲಿನ ಡಾ. ಶೇಖ್ ವಹೀದ್ ದಾವೂದ್ ಫ್ಯಾಮಿಲಿ ಟ್ರಸ್ಟ್ (ರಿ.) ವತಿಯಿಂದ 80ನೇ ಸ್ವಾತಂತ್ಯೋತ್ಸವವನ್ನು ಮಣಿಪಾಲದ ರಾಜೀವ್ ನಗರದ ಝೈನಬ್ ಟವರ್ ನಲ್ಲಿ ವಿಶೇಷವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾರ್ಜಾದ ಅಲ್ ರಯಾನಾ ಸ್ಟೀಲ್‌ನ ಮಾಲೀಕ ಎಂಜಿನಿಯರ್ ರಿಝ್ವಾನ್ ಹಂಝ ಅವರು ಸ್ವಾತಂತ್ಯೋತ್ಸವದ ಧ್ವಜಾರೋಹಣಗೈದರು. 




 

ಕಾರ್ಯಕ್ರಮದ ಸಂಚಾಲಕ ಹಾಗೂ ಸಂಘಟಕರಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಲ್ಪಸಂಖ್ಯಾತರ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ವಹೀದ್ ದಾವೂದ್ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮೌಲಾನಾ ಹಫೀಝ್  ಕಾರ್ಕಳ, ಮೊಹಮ್ಮದ್ ಅತೀಖ್ ಹುಸೈನ್, ಸೌದಿ ಅರೇಬಿಯಾದ ಜುಬೈಲ್‌ನ ಮೆಥನಾಲ್ ಕಂಪನಿಯ ಕ್ರೆಡಿಟ್ ಕಂಟ್ರೋಲರ್ ಶೇಖ್ ಸಲೀಂ, 80 ಬಡಗುಬೆಟ್ಟುನ ಮಾಜಿ ಪಂಚಾಯತ್ ಅಧ್ಯಕ್ಷ ಕೆ. ಶಾಂತಾರಾಮ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. 




ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಹಾಗು ಸಮಾಜ ಸೇವಕರಾದ ಬಾಬುಲಾಲ್ ಸಾಹೇಬ್, ಬಾಷಾ ಸಾಹೇಬ್ ಹಾಗು ಸಮಾಜ ಸೇವಕರಾದ ಮಾದ ಪೂಜಾರಿ ಅವರನ್ನು ಶೇಖ್ ವಹೀದ್ ದಾವೂದ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.