ಕುಂಜೂರು ಪಣಿಯೂರು ನೂರುಲ್ ಇಸ್ಲಾಂ ಮದರಸಾದಲ್ಲಿ ‘Madrasa Management App’ ಬಿಡುಗಡೆ

 


ಪಣಿಯೂರು: ಕುಂಜೂರು ಪಣಿಯೂರಿನ ನೂರುಲ್ ಇಸ್ಲಾಂ ಮದರಸಾದಲ್ಲಿ Braczero ಅಭಿವೃದ್ಧಿಪಡಿಸಿರುವ ‘Madrasa Management App’ ಅನ್ನು ಶನಿವಾರ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶೈಖುನಾ ಅಲ್ ಹಾಜ್ ಉಸ್ಮಾನ್ ಫೈಝಿ ಉಸ್ತಾದ್ ಸೇರಿದಂತೆ ಗಣ್ಯರು, ಮದರಸಾ ನಿರ್ವಹಣಾ ಸಮಿತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Braczero Tech Pvt. Ltdನ ವ್ಯವಸ್ಥಾಪಕ ನಿರ್ದೇಶಕ (MD) ಬಿಲಾಲ್ ಮೊಹಮ್ಮದ್, E26 Pvt. Ltd.ನ ವ್ಯವಸ್ಥಾಪಕ ನಿರ್ದೇಶಕ (MD) ಮಹಮ್ಮದ್ ಶರೀಫ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಮೊಹಮ್ಮದ್ ಹಝೀಮ್ ಶೈಮ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮದರಸಾ ಶಿಕ್ಷಣ ವ್ಯವಸ್ಥೆಯನ್ನು ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ಸುಲಭವಾಗಿ ನಿರ್ವಹಿಸುವ ಉದ್ದೇಶದಿಂದ ಈ ಆಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳ ಮಾಹಿತಿ, ತರಗತಿಗಳು, ಹಾಜರಾತಿ, ಪರೀಕ್ಷೆಗಳು, ಶುಲ್ಕ ಸೇರಿದಂತೆ ವಿವಿಧ ಆಡಳಿತಾತ್ಮಕ ಕಾರ್ಯಗಳನ್ನು ಒಂದೇ ವೇದಿಕೆಯ ಮೂಲಕ ನಿರ್ವಹಿಸಲು ಆಪ್ ಸಹಕಾರಿಯಾಗಲಿದೆ.

ಮದರಸಾ ಶಿಕ್ಷಣ ಹಾಗೂ ಆಡಳಿತ ವ್ಯವಸ್ಥೆಯ ಡಿಜಿಟಲೀಕರಣದತ್ತ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.