ಬುಟ್ಟಿಯಲ್ಲಿ ಮಣ್ಣು ಹೊತ್ತು ಟ್ಯ್ರಾಕ್ಟರ್ ಗೆ ತುಂಬಿದ ಸಚಿವ ಈಶ್ವರ ಖಂಡ್ರೆ!

ಚಿಂತಾಮಣಿ,: ಚಿಂತಾಮಣಿ ತಾಲೂಕು ಭೂಮಶೆಟ್ಟಿ ಹಳ್ಳಿಯಲ್ಲಿ ವಿಬಿಜಿ ರಾಮ್ ಜಿ ಅಡಿಯಲ್ಲಿ ಕೆರೆಯ ಹೂಳು ತೆಗೆಯುತ್ತಿದ್ದ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ಪರಿಶೀಲಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಅವರು ತಾವೂ ಮಣ್ಣಿನ ಮಂಕರಿ ಹೊತ್ತು ಟ್ರ್ಯಾಕ್ಟರ್ ಗೆ ತುಂಬಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ. ಎಂ.ಸಿ. ಸುಧಾಕರ್ ಅವರು ಕೂಡ ಕಾಮಗಾರಿಯಲ್ಲಿ ಕೈಜೋಡಿಸಿದರು. 

ಗ್ರಾಮಸ್ಥರು ವಿಬಿಜಿ ರಾಮ್ ಜಿ ಯೋಜನೆಯನ್ನು ಸಮರ್ಥವಾಗಿ ಬಳಸಿಕೊಂಡು ಪ್ರತಿ ನಿತ್ಯ ಲಭಿಸುವ 382 ರೂ. ಕೂಲಿಯ ಹಣ ಹಾಗೂ ಸಾಮಗ್ರಿಯ ಪ್ರಯೋಜನ ಪಡೆದು ತಮ್ಮ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಈಶ್ವರ ಖಂಡ್ರೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು.