ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ ಮತ್ತು ಮಹಿಳಾ PU ಕಾಲೇಜು; 80ನೇ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಕಣ್ಣೂರು ಆಂಗ್ಲ ಮಾಧ್ಯಮ ಶಾಲೆ ಮತ್ತು ಮಹಿಳಾ PU ಕಾಲೇಜು ಇದರ ವತಿಯಿಂದ  80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಶನಿವಾರದಂದು  ಶಾಲಾ ಮೈದಾನದಲ್ಲಿ ನಡೆಯಿತು.  

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿಯಾದ ಮಂಗಳೂರು ಸರ್ಕಲ್ ಇನ್ಸ್ಪೆಕ್ಟರ್ ಗುರುರಾಜ್, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ ರಾಷ್ಟ್ರಸೇವೆಯ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಇನ್ನೋರ್ವ ಅತಿಥಿ ಆದಿ ಸ್ವರೂಪರವರು ಸ್ವಾತಂತ್ರ್ಯ ದಿನದ ಪ್ರಾಮುಖ್ಯತೆ ಹಾಗೂ ಆಚರಿಸುವ ಕಾರಣವು ಭಾರತೀಯ ಪ್ರಜೆಗಳಾದ ನಮಗೆಲ್ಲರಿಗೂ ತಿಳಿದಿರಬೇಕೆಂದು ವಿಧ್ಯಾರ್ಥಿಗಳಿಗೆ ತಿಳಿ ಹೇಳಿದರು.



ಶಾಲೆಯ  ಜಂಟಿ ಕಾರ್ಯದರ್ಶಿಗಳಾದ ಹಾಜಿ ಅಬ್ದುಲ್ ಮಜೀದ್ ಸಿತಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಶಾಲೆಯ ಸಂಚಾಲಕರು ರಿಯಾಝ್ ಅಹಮದ್, ಆಡಳಿತ ಮಂಡಳಿಯ ಟ್ರಸ್ಟಿಗಳಾದ ಅಬ್ದುಲ್ ಕರೀಂ, ಅಬ್ದುಲ್ ಹಮೀದ್ ಹಾಗೂ ಕಾಂಗ್ರೆಸ್ ಕಾರ್ಯಕರ್ತ ಈ.ಕೆ ರಫೀಕ್ ಹಾಗೂ ಸಫ್ವಾನ್ ಉಪಸ್ಥಿತರಿದ್ದರು. ಧ್ವಜಾರೋಹಣದ ಬಳಿಕ ವಿದ್ಯಾರ್ಥಿಗಳು ವಿವಿಧ ಕಾರ್ಯಕ್ರಮಗಳ ಮೂಲಕ ಭಾರತದ ವೈವಿಧ್ಯತೆ, ಏಕತೆ ಮತ್ತು ಸ್ವಾತಂತ್ರ್ಯದ ಮಹತ್ವವನ್ನು ಮನೋಜ್ಞವಾಗಿ ಅನಾವರಣಗೊಳಿಸಿದರು.

ಸಂಚಾಲಕರಾದ ರಿಯಾಝ್ ಅಹ್ಮದ್ ಸ್ವಾಗತಿಸಿದರು. ಪ್ರಾರ್ಥನೆಯನ್ನು 10 ನೇ ತರಗತಿಯ ವಿದ್ಯಾರ್ಥಿನಿಯಾದ ನುಹೈಮ  ನೆರವೇರಿಸಿದರು.  ಶಾಲಾ ಮುಖ್ಯ ಶಿಕ್ಷಕಿ ಸಂಶಾದ್ ಸರ್ವರನ್ನು ವಂದಿಸಿದರು. ಅಧ್ಯಾಪಕಿಯಾದ ಜಯಲತರವರು ಕಾರ್ಯಕ್ರಮ ನಿರೂಪಿಸಿದರು.