ಮಂಗಳೂರಿನ ಕಣ್ಣೂರು ಮಹಿಳಾ ಪಿಯು ಕಾಲೇಜು: ಸತತ 6ನೇ ವರ್ಷ ಶೇ.100 ಫಲಿತಾಂಶ ದಾಖಲೆ; ಅಭಿನಂದಿಸಿದ ಅಬ್ದುಲ್ ಮಜೀದ್ ಸಿತಾರ್

ಮಂಗಳೂರು: ಕಣ್ಣೂರು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್(ರಿ)ನ ಅಧೀನದಲ್ಲಿ ಕಳೆದ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಕಣ್ಣೂರು ಮಹಿಳಾ ಪಿಯು ಕಾಲೇಜು 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.

ಪರೀಕ್ಷೆಗೆ ಹಾಜರಾದ ಪರೀಕ್ಷೆಗೆ 23 ವಿದ್ಯಾರ್ಥಿನಿಗಳ ಪೈಕಿ 9 ಮಂದಿ ಉನ್ನತ ಶ್ರೇಣಿಯಲ್ಲಿ ಮತ್ತು 14 ಮಂದಿ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಈ ಪೈಕಿ ಆಯಿಷತುಲ್ ಮುಬಶ್ಶಿರ 575 (ಶೇ.95.83), ಫಾತಿಮ ಶಹೀಮ 567 (ಶೇ.94.50), ಅವ್ವ ಶಾಝಿಮ 567 (ಶೇ.94.50), ಶಾಹಿನ ಬಾನು 566 (ಶೇ.94.33), ಝೈನಬ ಅಲ್ಸಿಯಾ 561 (ಶೇ.93.50), ಹಾಝರ ಮುನಾಝ 545 (ಶೇ.90.83) ಅಂಕಗಳಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. ಮಕ್ಕಳ ಸಾಧನೆಯನ್ನು ಕಣ್ಣೂರು ಮಹಿಳಾ ಪಿಯು ಕಾಲೇಜು ಹಾಗು ಹೈಸ್ಕೂಲಿನ ಕಾರ್ಯದರ್ಶಿ ಅಬ್ದುಲ್ ಮಜೀದ್ ಸಿತಾರ್ ಅಭಿನಂದಿಸಿದ್ದಾರೆ.