ಉಡುಪಿ: ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ವಂಶ ದ್ವಂಸ ಮಾಡುವ ಜೀವ ಬೆದರಿಕೆ ಒಡ್ಡಿ, ನೀಟ್ ವಿದ್ಯಾರ್ಥಿ ಚಳವಳಿಯನ್ನು ಹೀನಾಯವಾಗಿ ನಿಂದಿಸಿ ದ್ವೇಷ ಭಾಷಣ ಮಾಡಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣರ ಚಾರಿತ್ರ್ಯ ಹೀನ ನಡೆಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಉಡುಪಿ ನಗರದ ಹಳೆಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಶುಕ್ರವಾರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯಲ್ಲಿ ಯಶ್‌ಪಾಲ್ ಸುವರ್ಣರನ್ನು 10 ತಲೆ ಹಾಗೂ ಎಂಟು ಕೈಗಳ ರಾವಣನಂತೆ ಬಿಂಬಿಸಿದ ಕಟೌಟ್ ಗಮನ ಸೆಳೆಯಿತು. ಚಡ್ಡಿ ಧರಿಸಿರುವ ಯಶ್‌ಪಾಲ್, ಕೈಗಳಲ್ಲಿ ಮದ್ಯದ ಬಾಟಲಿ, ಐಸ್‌ಕ್ಯಾಂಡಿ, ಮೊಬೈಲ್, ಟವಲ್, ಜೋಕರ್ ಇಸ್ಪೀಟ್, ಮೆಲೋಡಿ ಚಾಕಟೇಲ್, ಚೊಂಬುಗಳನ್ನು ಹಿಡಿದುಕೊಂಡಿರುವಂತೆ ಕಟೌಟ್‌ನಲ್ಲಿ ಚಿತ್ರಿಸಲಾಗಿತ್ತು.
ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಈ ಕಟೌಟ್‌ಗೆ ಮೊಟ್ಟೆಗಳನ್ನು ಎಸೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಯಶ್‌ಪಾಲ್ ವಿರುದ್ಧ ಘೋಷಣೆ ಗಳನ್ನು ಕೂಗುತ್ತ ರಾವಣನಂತೆ ಬಿಂಬಿಸಲಾದ ಯಶ್‌ಪಾಲ್ ಸುವರ್ಣರ ಪ್ರತಿಕೃತಿಯನ್ನು ದಹಿಸಲಾಯಿತು.
ಪ್ರತಿಭಟನೆಯಲ್ಲಿ ಸಹ್ರಾಸರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡಿದ್ದು ಶಾಸಕ ಯಶ್ ಪಾಲ್ ವಿರುದ್ಧ ತೀವ್ರ ಆಕ್ರೋಶ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಾಗ್ಮಿ ನಿಕೇತ್ ರಾಜ್ ಮೌರ್ಯ, ಕಾಂಗ್ರೆಸ್ ಮುಖಂಡರಾದ ಗೋಪಾಲ್ ಪೂಜಾರಿ, ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್, ಅಮೃತ್ ಶೆಣೈ, ಪ್ರಖ್ಯಾತ್ ಶೆಣೈ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಭಾಗವಹಿಸಿದ್ದರು.





