ಮಂಗಳೂರು; ಎಸ್‌ಇಎಸ್ ಆಸ್ಪತ್ರೆ ಮುಖ್ಯಸ್ಥ ಡಾ. ಜೀವರಾಜ್ ಸೊರಕೆಗೆ ಸನ್ಮಾನ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು (ಮಡಿಕೇರಿ) ಹಾಗೂ ನೆರೆಯ ಕಾಸರಗೋಡು ಜಿಲ್ಲೆಯ ಜನತೆಗೆ ಹಲವು ದಶಕಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಎಸ್‌ಇಎಸ್ ಆಸ್ಪತ್ರೆಯ ಮುಖ್ಯಸ್ಥ ಡಾ. ಜೀವರಾಜ್ ಸೊರಕೆ ಅವರನ್ನು ಝುಲೈಕ ಟ್ರೇಡಿಂಗ್ ಕಂ. ಮುಖ್ಯಸ್ಥ, ಅನಿವಾಸಿ ಭಾರತೀಯ ಉದ್ಯಮಿ ಆತೀಫ್ ಹಸನ್ ಹಾಗೂ ಜಿಲ್ಲೆಯ ಹೆಸರಾಂತ ಯುವ ಸಾಮಾಜಿಕ ಮುಖಂಡ ಎ.ಕೆ.ಅನ್ಸಾಫ್ ಅವರು ಗಿಡ ನೀಡಿ ಗೌರವಪೂರ್ವಕವಾಗಿ ಸನ್ಮಾನಿಸಿದರು. 

ವೈದ್ಯಕೀಯ ಸೇವೆಯನ್ನು ವೃತ್ತಿಯಷ್ಟೇ ಅಲ್ಲ, ಸಮಾಜಸೇವೆಯಾಗಿ ಪರಿಗಣಿಸಿ ಸಾವಿರಾರು ರೋಗಿಗಳ ವಿಶ್ವಾಸ ಗಳಿಸಿರುವ ಡಾ. ಸೊರಕೆ ಅವರ ಮಾನವೀಯ ಸೇವೆ ಮತ್ತು ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅಮೂಲ್ಯ ಕೊಡುಗೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. ಅವರ ಸೇವಾ ಮನೋಭಾವವು ಮುಂದಿನ ಪೀಳಿಗೆಯ ವೈದ್ಯರಿಗೆ ಪ್ರೇರಣೆಯಾಗಲಿ ಎಂದು ಹಾರೈಸಲಾಯಿತು. 

ಈ ಸಂದರ್ಭದಲ್ಲಿ ಕ್ಲಿನಿಕಲ್ ನ್ಯೂಟ್ರಿಶಿಯನಿಸ್ಟ್ ದಿವ್ಯ ಡಿ ಕೆ , ಜನರಲ್ ಫೀಝಿಶಿಯನ್ ಹಿನಾಝ್ ಜಮೀಲಾ ಇಕ್ಬಾಲ್ , ಪಿ ಆರ್ ಓ ಗಳಾದ ಜೀವನ್ ಕುಮಾರ್, ಮೊಹಮ್ಮದ್ ಅನಿಶ್ ಮುಂತಾದವರು ಉಪಸ್ಥಿತರಿದ್ದರು.