
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಮೂಳೂರಿನ ಅಲ್-ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶೇ 100% ಫಲಿತಾಂಶ ದಾಖಲಿಸಿದೆ.
ಒಟ್ಟು 144 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 26 ಮಂದಿ ಉನ್ನತ ಶ್ರೇಣಿ, 96 ಮಂದಿ ಪ್ರಥಮ ಶ್ರೇಣಿ, 18 ಮಂದಿ ದ್ವಿತೀಯ ಶ್ರೇಣಿ, 4 ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್‌ಶಾ ಫಾತಿಮಾ 606(96.96%) ಹಾಗು ಫಾತಿಮತ್ ಹಸ್ನಾ ಬಿ.ಎಮ್. 587(93.92%) ಅಂಕ ಪಡೆದು ಸಾಧನೆ ಮೆರೆದಿದ್ದಾರೆ.

