ಅಂತ್ಯಕ್ರಿಯೆ ವೇಳೆ ಏಕಾಏಕಿ ಶವಪೆಟ್ಟಿಗೆಯೊಳಗಿನಿಂದ ಎದ್ದು ಕುಳಿತ 15 ವರ್ಷದ ಬಾಲಕಿ! ಮುಂದೆ ಏನಾಯಿತು ನೋಡಿ...

15 ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾರೆಂದು ಘೋಷಿಸಿದ ಬರೋಬ್ಬರಿ 8 ಗಂಟೆಗಳ ಬಳಿಕ ಆಕೆಯ ಅಂತ್ಯಕ್ರಿಯೆ ನೆರವೇರಿಸುವ ಕೊನೆಗಳಿಗೆಯಲ್ಲಿ ಏಕೆ ತನ್ನ ಶವಪೆಟ್ಟಿಗೆಯಿಂದ ಎದ್ದು ಕುಳಿತಿರುವ ವಿಸ್ಮಯಕಾರಿ ಘಟನೆ ಗ್ವಾಟೆಮಾಲಾದ ಎಲ್ ಜೊಕೋಟ್‌ ಎಂಬ ಪ್ರದೇಶದಲ್ಲಿ ನಡೆದಿದೆ.

ಹೀಗೆ ಸಾವನ್ನೇ ಗೆದ್ದು ಬಂದ ಈ 15ರ ಹರೆಯದ ಬಾಲಕಿಯ ಹೆಸರು ಯುಲೀಡಿ ಇಕ್ಸ್ಕೊಟೊಯಾಕ್. ಇನ್ನು ಜಗತ್ತನ್ನೇ ಸರಿಯಾಗಿ ಅರಿಯದ ಈ ಬಾಲಕಿಯನ್ನು ವೈದ್ಯಕೀಯ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದಾಗ ಅ.10ರಂದು ಶನಿವಾರ ಬೆಳ್ಳಿಗೆ ಏಕಾಏಕಿ ಕಾರಿನಲ್ಲಿ ತನ್ನ ತಂದೆಯ ಎದುರೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾಳೆ. ಹೀಗೆ ಕುಸಿದ ಬಿದ್ದ ಈಕೆಯನ್ನು ತಕ್ಷಣವೇ ಯಾವುದೇ ಚಲನೆಯಿಲ್ಲದ ಈಕೆಯ ನಾಡಿಮಿಡಿತ ಹಾಗೂ ಉಸಿರಾಟವನ್ನು ಅಲ್ಲಿನ ಸ್ಥಳೀಯ ಪಾದ್ರಿ ಅಬ್ರಾಹಾಂ ಎಂಬುವವರು ಪರಿಶೀಲನೆ ಮಾಡಿದಾಗ ಯಾವುದೇ ದೈಹಿಕ ಚಟುವಟಿಕೆಗಳು ಕಂಡುಬಾರದೆ ಚಲನೆಯಿಲ್ಲದೆ ಬಿದ್ದಿದ್ದಾಳೆ. ಇದರಿಂದಾಗಿ ಆತ ಕೊನೆಗೆ ಈ ಯುಲೀಟ್‌ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ. 

ಹೀಗೆ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪಾದ್ರಿ ಹೇಳುತ್ತಿದ್ದಂತೆ ಆಘಾತಕ್ಕೊಳಗಾಗಿರುವ ಕುಟುಂಬಸ್ಥರು ಸಾವನ್ನಪ್ಪಿದ್ದಾಳೆ ಎಂದು ನಂಬಲಾಗಿದ್ದ ಈಕೆಯನ್ನು ಈ ವಿಚಾರದ ದೃಢೀಕರಣಕ್ಕೆ ವೈದ್ಯರ ಬಳಿಗೆ ಕರೆದುಕೊಂಡು ಹೋಗಿಲ್ಲ. ಅಲ್ಲದೆ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮರಣ ಪ್ರಮಾಣ ಪತ್ರವನ್ನೂ ಸಹ ಪಡೆದಿಲ್ಲ. ಬದಲಾಗಿ ಆಕೆಯ ಯಾವುದೇ ಚಲನೆಯಿಲ್ಲದೆ ಬಿದ್ದಿರುವುದನ್ನು ನೋಡಿ ಈಕೆಯ ನಿಜವಾಗಿಯೂ ಸಾವನ್ನಪ್ಪಿದ್ದಾಳೆ ಎಂದುಕೊಂಡು ಆಕೆಯನ್ನು ಎಲ್ ಜೊಕೋಟ್‌ನಲ್ಲಿ ಕುಟುಂಬದ ಮನೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಶವಪೆಟ್ಟಿಗೆಯನ್ನು ತರಿಸಿ ಆಕೆಯ ಅಂತ್ಯಕ್ರಿಯೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ಅದೇ ದಿನ ಮಧ್ಯಾಹ್ನ 2:30 ಕ್ಕೆ ಜಾಗರಣೆ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿದ್ದು, ಮನೆಯಲ್ಲಿ ಶೋಕಾಚರಣೆಗಾಗಿ ಜನರು ಜಮಾಯಿಸಿದ್ದಾರೆ.

ಹೀಗೆ ಬರೋಬ್ಬರಿ 8 ಗಂಟೆಗಳ ಬಳಿಕ ಅಂತ್ಯಕ್ರಿಯೆ ನಡೆಯಲಿದೆ ಎಂಬ ಕೊನೆ ಕ್ಷಣದಲ್ಲಿ ಅಚ್ಚರಿಯೆಂಬಂತೆ ಈ ಗುಲಾಬಿ ಬಣ್ಣದ ಬಟ್ಟೆ ಧರಿಸಿದ್ದ ಯುಲೀಡ್‌ ತನ್ನನ್ನು ಮಲಗಿಸಲಾಗಿದ್ದ ಶವಪೆಟ್ಟಿಗೆಯಿಂದ ಏಕಾಏಕಿ ಎದ್ದು ಕುಳಿತಿದ್ದಾಳೆ. ಅಷ್ಟೇ ಅಲ್ಲದೆ, ಉಸಿರಾಡುತ್ತಾ ಮಾತನಾಡಲು ಸಹ ಪ್ರಯತ್ನಿಸಿದ್ದಾಳೆ. ಈ ಘಟನೆಯಿಂದ ಅಲ್ಲಿದ್ದವರು ಕೆಲವು ಕ್ಷಣ ಆಶ್ಚರ್ಯಚಕಿತರಾಗಿದ್ದು, ಆಕೆಯ ತಂದೆ ಆಕೆಗೆ ನೀರನ್ನು ಕುಡಿಸಿದ್ದಾರೆ. ತಾಯಿ ಸಹ ಪಕ್ಕದಲ್ಲೇ ಅಳುತ್ತಾ ಕಂಡುಬಂದಿದ್ದಾಳೆ. ಹೀಗೆ ಜೀವವೇ ಹೋಗಿದೆ ಎಂಬಂತಿದ್ದ ಬಾಲಕಿ ಮತ್ತೆ ಪ್ರಾಣಸಹಿತ ಎದ್ದಿರುವುದನ್ನು ಕಂಡು ಅಲ್ಲಿ ನೆರೆದಿದ್ದ ಎಲ್ಲರೂ ಸಂತೋಷದಿಂದ ಮತ್ತೆ ʼಹಲ್ಲೇಲೂಯಾʼ ಎಂದು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇನ್ನು, ಮಗಳು ಹೀಗೆ ಅದ್ಭುತ ಸಾದೃಶ್ಯವಾಗಿ ಶವಪೆಟ್ಟಿಗೆಯಿಂದ ಜೀವಂತ ಎದ್ದುಬಂದಿರುವ ಕುರಿತು ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಬಾಲಕಿಯ ತಾಯಿ ತನ್ನ ಮಗಳು ಸಾವನ್ನಪ್ಪಿಲ್ಲ ಎಂದು ನಾನು ಹಲವು ಬಾರಿ ಹೇಳಿದ್ದರೂ ಯಾರೂ ನಂಬಿಲ್ಲ ಎಂದಿದ್ದಾರೆ. ಈ ಕುರಿತು "ನಾನು ಶವಪೆಟ್ಟಿಗೆಯಲ್ಲಿದ್ದ ನನ್ನ ಮಗಳನ್ನು ಕಂಡಾಗ ಆಕೆಯಲ್ಲಿ ನಾನು ಚಲನೆಯನ್ನು ಗಮನಿಸಿದೆ. ಕೂಡಲೇ ನನ್ನ ಮಗಳು ಸತ್ತಿಲ್ಲ ಎಂದು ಹಲವು ಬಾರಿ ಎಲ್ಲರಿಗೂ ತಿಳಿಸಿರೂ ಯಾರೂ ನಂಬಿಲ್ಲ. ಆದರೆ, ಅದೃಷ್ಟವೆಂಬಂತೆ ನನ್ನ ಮಗಳು ಕೊನೆಗೆ ಶವಪೆಟ್ಟಿಗೆಯ ಬಳಿ ಅಳುತ್ತಿರುವಾಗ ನನ್ನ ಮಗಳಲ್ಲಿ ಚಲನೆಯನ್ನು ಎಲ್ಲರೂ ಗಮನಿಸಿದ್ದು, ಕೊನೆಗೆ ನಾವು ಅದರ ಬಾಗಿಲನ್ನು ತೆರೆಯುತ್ತಿದ್ದಂತೆ ಆಕೆ ಎಚ್ಚರವಾಗಿದ್ದು, ಇದ್ದಕ್ಕಿದ್ದಂತೆ ಅದರಿಂದ ಎದ್ದು ಕುಳಿತುಕೊಂಡಳು" ಎಂದು ತಿಳಿಸಿದ್ದಾರೆ. ಇತ್ತ, "ತನ್ನ ಮಗಳು ತನ್ನ ಮುಂದೆಯೇ ಮೂರ್ಛೆ ಹೋಗಿದ್ದ ಘಟನೆಯಿಂದ ಆಘಾತಕ್ಕೊಳಗಾಗಿದ್ದ ತಂದೆ ಆಕೆ ತನ್ನ ಜೀವವನ್ನು ದಾರಿಯಲ್ಲೇ ಕಳೆದುಕೊಂಡಿದ್ದಳು, ಆಕೆ ಉಸಿರಾಡುತ್ತಿರಲಿಲ್ಲ, ಅವಳ ಮಣಿಕಟ್ಟುಗಳ ಮೇಲೆ ಅವಳ ನಾಡಿಮಿಡಿತವನ್ನು ನಾನು ಅನುಭವಿಸಲು ಸಾಧ್ಯವಾಗಲಿಲ್ಲ" ಎಂದು ಆ ಭೀಕರ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.

ಇತ್ತ, ಬರೋಬ್ಬರಿ 8 ಗಂಟೆಗಳ ಕಾಲ ಶವಪೆಟ್ಟಿಗೆಯಲ್ಲಿ ಇದ್ದು, ಬಳಿಕ ಜೀವಂತವಾಗಿ ಎದ್ದುಬಂದ ಬಾಲಕಿ ಯೂಲೀಡಿ ಸಹ ತನ್ನ ಈ ಘಟನೆಯನ್ನು ಪವಾಡ ಎಂದು ಕರೆದಿದ್ದಾಳೆ. ಈ ಕುರಿತು ಪ್ರತಿಕ್ರಿಯೆ ನೀಡಿ ತಾನು ಕಾರಿನಲ್ಲಿದ್ದ ಕ್ಷಣವನ್ನು ನೆನಪಿಸಿಕೊಳ್ಳುತ್ತಾ "ನನ್ನ ಹೃದಯ ನಿಜವಾಗಿಯೂ ಕೆಟ್ಟದಾಗಿ ನೋಯಲು ಪ್ರಾರಂಭಿಸಿತ್ತು. ಅದು ಭಾರವಾಗಿತ್ತು, ಮತ್ತು ನಂತರ ನಾನು ಮೂರ್ಛೆ ಹೋಗಿದ್ದೆ. ಆದರೆ, ನಾನು ಹೀಗೆ ಎದ್ದಿರುವುದು ಪವಾಡದಂತಿದ್ದು, ನನಗೆ ಜೀವಕೊಟ್ಟಿದ್ದಕ್ಕಾಗಿ ದೇವರಿಗೆ ಹಾಗೂ ನನ್ನ ಪೋಷಕರಿಗೆ ಧನ್ಯವಾದ" ಎಂದಿದ್ದಾಳೆ.