ಮಲ್ಪೆ ಮೀನುಗಾರಿಕಾ ಕಾರ್ಮಿಕನ ಮೇಲೆ ಹಲ್ಲೆ ಪ್ರಕರಣ; ಹಲ್ಲೆಗೊಳಗಾದವರನ್ನು ಭೇಟಿಯಾದ SDTU ಉಡುಪಿ ಜಿಲ್ಲಾ ನಿಯೋಗ
ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಏಲಂ ಮಾಡುವ ಅಯ್ಯೂಬ್ ಎಂಬ ಕಾರ್ಮಿಕನ ಮೇಲೆ ನಡೆದ ಹಲ್ಲೆಯ ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ಅಯ್ಯೂಬ್ ರವರನ್ನು ಎಸ್ಡಿಟಿಯು ಉಡುಪಿ ಜಿಲ್ಲಾ ನಿಯೋಗ ಅವರ ಸ್ವಗೃಹದಲ್ಲಿ ಭೇಟಿಯಾಗಿ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿತು.
ಈ ಸಂದರ್ಭದಲ್ಲಿ ಹಲ್ಲೆಯನ್ನು ಖಂಡಿಸಿ ಪತ್ರಿಕಾ ಪ್ರಕಟಣೆ ನೀಡಿದ ಎಸ್ಡಿಟಿಯು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಕಾಪು, ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳು ಎಷ್ಟೇ ಪ್ರಭಾವಿಗಳಾದರೂ ಪೊಲೀಸರು ಸೂಕ್ತ ಕಾನೂನು ಕ್ರಮ ಜರುಗಿಸಿ
ಕಾರ್ಮಿಕರ ಭದ್ರತೆಯನ್ನು ಖಾತ್ರಿಪಡಿಸಬೇಕು. ಹಳ್ಳೆಗೊಳಗಾದ ಅಯ್ಯೂಬ್ ರವರ ಜೊತೆ ನ್ಯಾಯ ಪರ ಹೋರಾಟದಲ್ಲಿ ಎಸ್ಡಿಟಿಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಾ ಮಲ್ಪೆ ಬಂದರು ಪ್ರದೇಶದಲ್ಲಿ ಕಾರ್ಮಿಕರ ಮೇಲೆ ಇಂತಹ ದೌರ್ಜನ್ಯ ಘಟನೆಗಳು ಮರುಕಳಿಸದಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನಿಯೋಗದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಖಾದರ್ ಕಾಪು, ಉಪಾಧ್ಯಕ್ಷರಾದ ರಫೀಕ್ ಪೊಲಿಪು, ಜೊತೆ ಕಾರ್ಯದರ್ಶಿ ಕಲೀಲ್ ಉಚ್ಚಿಲ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಲಿಯಾಕತ್ ಉಪಸ್ಥಿತರಿದ್ದರು.