ಬೆಂಗಳೂರು: ಬಹುನಿರೀಕ್ಷಿತ ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಣದಲ್ಲಿದ್ದ ಒಟ್ಟು 8 ಅಭ್ಯರ್ಥಿಗಳ ಭವಿಷ್ಯ ಪ್ರಕಟವಾಗಿದೆ.
ಕಾಂಗ್ರೆಸ್ನ ಎಲ್ಲಾ ಐದು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ದ 8 ಅಭ್ಯರ್ಥಿಗಳ ಪೈಕಿ ಬಿಜೆಪಿಯ ಇಬ್ಬರು ಮತ್ತು ಕಾಂಗ್ರೆಸ್ 5 ಅಭ್ಯರ್ಥಿಗಳು ಮೇಲ್ಮನೆಗೆ ಪ್ರವೇಶ ಪಡೆದಿದ್ದಾರೆ. ಆದ್ರೆ, ಜೆಡಿಎಸ್ ಪಕ್ಷಕ್ಕೆ ಸೋಲಿನ ಆಘಾತ ಉಂಟಾಗಿದೆ.
ಬಿಜೆಪಿಯಿಂದ, ಜೆಡಿಎಸ್ನಿಂದ ಅಡ್ಡ ಮತದಾನ
ಜೆಡಿಎಸ್ ಪಕ್ಷದ ಅಭ್ಯರ್ಥಿ ಗೋವಿಂದ ರಾಜುಗೆ ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ ಪಕ್ಷದ 5ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ವಿನಯ್ ಕಾರ್ತಿಕ್ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಅಡ್ಡಮತದಾನದಿಂದ ವಿನಯ್ ಕಾರ್ತಿಕ್ ಅವರು ನಿರೀಕ್ಷೆಗಿಂತ ಹೆಚ್ಚು ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಬಿಜೆಪಿ ಜೆಡಿಎಸ್ ಮತ ಸೆಳೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಗೆ 32 ಮತಗಳು ಸಿಕ್ಕಿದ್ದರೆ ಜೆಡಿಎಸ್ ನ ಗೋವಿಂದರಾಜುಗೆ ಕೇವಲ 14 ಮತಗಳು ಮಾತ್ರ ಬಂದಿವೆ. ಜೆಡಿಎಸ್ ನಿಂದ ಮೂವರು ಹಾಗೂ ಬಿಜೆಪಿಯಿಂದ ಮೂವರು ಕ್ರಾಸ್ ವೋಟಿಂಗ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
