ಉಡುಪಿ: ಅನಿವಾಸಿ ಭಾರತೀಯರ (ಎನ್‌ಆರ್‌ಐ) ಹಿತಾಸಕ್ತಿಗಳನ್ನು ರಕ್ಷಿಸಲು ಹಾಗೂ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರತ್ಯೇಕ ಎನ್‌ಆರ್‌ಐ ಸಚಿವಾಲಯ ರಚಿಸುವ ಮಹತ್ವದ ನಿರ್ಧಾರವನ್ನು ಉಡುಪಿ ಜಿಲ್ಲಾ ಎನ್‌ಆರ್‌ಐ ಘಟಕದ ಮಾಜಿ ಅಧ್ಯಕ್ಷ ಡಾ. ಶೇಖ್ ವಹಿದ್ ದಾವೂದ್ ಸ್ವಾಗತಿದ್ದಾರೆ.
ಈ ಐತಿಹಾಸಿಕ ಹೆಜ್ಜೆಗೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿಯ ನಾಯಕತ್ವವನ್ನು ಅಭಿನಂದಿಸಿದ್ದಾರೆ. ಅದೇ ರೀತಿ, ವಿಧಾನ ಪರಿಷತ್ ಸದಸ್ಯರಾದ ಡಾ. ಆರತಿ ಕೃಷ್ಣ ಅವರು ಎನ್‌ಆರ್‌ಐ ಸಚಿವಾಲಯದ ಸ್ಥಾಪನೆಗಾಗಿ ನಿರಂತರವಾಗಿ ಮಾಡಿದ ಪ್ರಯತ್ನಗಳು ಮತ್ತು ಬದ್ಧತೆಯು ಪ್ರಶಂಸನೀಯವಾಗಿದೆ ಎಂದಿದ್ದಾರೆ.
ಎನ್‌ಆರ್‌ಐ ಸಮುದಾಯದ ಬಹುಕಾಲದ ಬೇಡಿಕೆಯಾಗಿದ್ದ ಈ ಸಚಿವಾಲಯವು ವಿದೇಶದಲ್ಲಿರುವ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸುವ ಪರಿಣಾಮಕಾರಿ ವೇದಿಕೆಯಾಗಲಿದ್ದು, ಅವರ ಕಲ್ಯಾಣ ಮತ್ತು ಅಭಿವೃದ್ಧಿಗೆ ಹೊಸ ದಿಕ್ಕನ್ನು ನೀಡಲಿದೆ ಎಂಬ ವಿಶ್ವಾಸವಿದೆ. ಈ ಮಹತ್ವದ ನಿರ್ಧಾರಕ್ಕೆ ಕಾರಣಕರ್ತರಾದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಡಾ. ಶೇಖ್ ವಹಿದ್ ದಾವೂದ್ ಸಲ್ಲಿಸಿದ್ದಾರೆ.
