ಕಾಪು: ಇಲ್ಲಿನ ಚಂದ್ರನಗರದ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ ಹೊಸ ಶೈಕ್ಷಣಿಕ ವರ್ಷ(2026-27)ದ ಆರಂಭದ ಹಿನ್ನೆಲೆಯಲ್ಲಿ ಶನಿವಾರ ಪೋಷಕರ ಪರಿಚಯ(Parents Orientation Program) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಕ್ರೆಸೆಂಟ್ ಇಂಟರ್ನ್ಯಾಷನಲ್ ಸ್ಕೂಲ್ ನ ಆಡಳಿತ ನಿರ್ದೇಶಕ ಆಸಿಫ್ ಶಂಶುದ್ದೀನ್, ಸಂಪನ್ಮೂಲ ವ್ಯಕ್ತಿಗಳಾಗಿ ಒಬಿಎಸ್ ಪಬ್ಲಿಕೇಶನ್ ನ ಆಗಸ್ಟಿನ್ ಹಾಗು ಚೇತನ್, ಪಿನಾಕಲ್ ಪಬ್ಲಿಕೇಶನ್ ನ ನಾಸಿರ್, ಪೊಲೀಸ್ ಇಲಾಖೆಯ ರಝಾಕ್, ಪ್ರಾಂಶುಪಾಲರಾದ ಅಕ್ಬರ್ ಅಲಿ, ಉಪ ಪ್ರಾಂಶುಪಾಲರಾದ ಗುರುದತ್, ಫಿಟ್ನೆಸ್ ತರಬೇತುದಾರ ಅಝೀಮ್ ಹಾಗೂ ಮಕ್ಕಳ ಪೋಷಕರು ಮತ್ತು ಸಿಬ್ಬಂದಿಗಳು ಹಾಜರಿದ್ದರು.











