ನೇಜಾರು ಅಲ್ ಫಲಾಹ್ ವೆಲ್ಫೇರ್ ಇನಿಶಿಯೇಟಿವ್ & ಮಿಡಲ್ ಈಸ್ಟ್ ವತಿಯಿಂದ ಇಫ್ತಾರ್ ಕೂಟ

ಉಡುಪಿ: ಅಲ್  ಫಲಾಹ್ ವೆಲ್ಫೇರ್ ಇನಿಶಿಯೇಟಿವ್ ನೇಜಾರು & ಮಿಡಲ್ ಈಸ್ಟ್ ವತಿಯಿಂದ ರವಿವಾರ ನೇಜಾರಿನ ಜಾಮೀಯಾ ಜುಮ್ಮಾ ಮಸ್ಜಿದ್ ಯಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು. 






ಉಡುಪಿ ಸಂಯುಕ್ತ ಜಮಾತ್ ಅಧ್ಯಕ್ಷ ಪಿ.ಅಬೂಬಕ್ಕರ್ ನೇಜಾರು, ಜುಮ್ಮಾ ಮಸ್ಜಿದ್ ನ ಖತೀಬ್ ಉಸ್ಮಾನ್ ಮದನಿ ಹಾಗೂ ಮಸೀದಿಯ ಅಧ್ಯಕ್ಷ ಖಾಸಿಂ, ಕಾರ್ಯದರ್ಶಿ ಶಾಹಿದ್, ಸ್ವಲಾತ್ ಕಮಿಟಿ ಅಧ್ಯಕ್ಷ ಮೊಹಮ್ಮದ್, ಅಲ್  ಫಲಾಹ್ ವೆಲ್ಫೇರ್ ಇನಿಶಿಯೇಟಿವ್ ಅಧ್ಯಕ್ಷ ನೌಫಾಲ್ ನೇಜಾರು, ಕಾರ್ಯದರ್ಶಿ ನಿಹಾಲ್ ನೇಜಾರು ಹಾಗು ಸಂಘದ ಮತ್ತಿತರರು ಭಾಗವಹಿಸಿದ್ದರು. ಸುಮಾರು 400ಕ್ಕೂ ಅಧಿಕ ಮಂದಿ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.