ದುಬೈ; ಬ್ಯಾರೀಸ್ ಕಲ್ಚರಲ್ ಫೋರಮ್(BCF) ವತಿಯಿಂದ ಡಿ.ಕೆ. ಶಿವಕುಮಾರ್'ಗೆ ಸನ್ಮಾನ

ದುಬೈ; ಬ್ಯಾರೀಸ್ ಕಲ್ಚರಲ್ ಫೋರಮ್(BCF) ವತಿಯಿಂದ ಡಿ.ಕೆ. ಶಿವಕುಮಾರ್'ಗೆ ಸನ್ಮಾನದುಬೈ(Headlines Kannada): ಬ್ಯಾರೀಸ್ ಕಲ್ಚರಲ್ ಫೋರಮ್ ( BCF )ದುಬಾಯಿ ವತಿಯಿಂದ ಇತ್ತೀಚಿಗೆ,  ಕರ್ನಾಟಕದ ಜನಪ್ರಿಯ ರಾಜಕೀಯ ನೇತಾರ, ನಾಗರಾಭಿವೃದ್ಧಿ, ಇಂಧನ ಸಹಿತ ಹಲವಾರು ಮುಖ್ಯ ಇಲಾಖೆಗಳ ಮಂತ್ರಿ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ರಾಜಕೀಯ ಮುತ್ಸದ್ದಿ, ಪ್ರಸ್ತುತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ  ಡಿ.ಕೆ.ಶಿವಕುಮಾರ ಅವರನ್ನು ದುಬೈ ಯ ಎಮಿರೇಟ್ಸ್ ಪ್ಯಾಲೇಸ್ ಹೋಟೆಲಿನ ಸಭಾಂಗಣದಲ್ಲಿ ಹೃದಯ ಪೂರ್ವಕವಾಗಿ ಸನ್ಮಾನಿಸಲಾಯಿತು. 

B C F ಸಂಸ್ಥೆಯ ಹಲವಾರು ನಾಯಕರು, ಪದಾಧಿಕಾರಿಗಳು ಮತ್ತು ಕರ್ನಾಟಕ  ಪ್ರದೇಶ ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹಾರಿಸ್ ನಳಪಾಡ್, ಜನಾಬ್ U T ಇಫ್ತಿಕಾರ್ ಮೊದಲಾದ  ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಯಿತು. 

ಈ ಸನ್ಮಾನ ಸಮಾರಂಭಕ್ಕೆ ಪೂರ್ವಭಾವಿಯಾಗಿ ಮಾನ್ಯ ಡಿ.ಕೆ.ಶಿವಕುಮಾರ್ ರೊಂದಿಗೆ BCF ಅಧ್ಯಕ್ಷರಾದ ಡಾ.ಬಿ ಕೆ ಯೂಸುಫ್ ರವರ ಅನುಪಸ್ಥಿತಿಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮಹಮದ್ , ಉಪಾಧ್ಯಕ್ಷರಾದ ಎಂ.ಈ.ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ , ಅಫೀಕ್ ಹುಸೈನ್, ಕೋಶಾಧಿಕಾರಿ ಅಸ್ಲಮ್ ಕಾರಾಜೆ, ಪದಾಧಿಕಾರಿಗಳಾದ  ಯಾಕೂಬ್ ದೀವಾ, ಸಮದ್ ಬೀರಾಲಿ, ರಫೀಕ್ ಸತ್ತಿಕಲ್, ಹುಸೈನ್ ಸತ್ತಿಕಲ್,  ಸಂಸ್ಥೆಯ ಹಿತೈಷಿಗಳಾದ ಶಾರ್ಫ್ರಾಜ್ ಜುಕಾಕೋ,  ಯೂಸುಫ್ HMC ,  ಅಜೀಮ್ ಉಚ್ಚಿಲ ಮೊದಲಾದವರು ಉಪಸ್ಥಿತರಿದ್ದರು.  

ಪ್ರಸಕ್ತ ಕರ್ನಾಟಕದ ಸಾಮಾಜಿಕ ಪರಿಸ್ಥಿತಿ, ಮುಖ್ಯವಾಗಿ ಅನಿವಾಸಿ ಕನ್ನಡಿಗರ ಸಮಸ್ಯೆಗಳು ಮೊದಲಾದ ವಿಷಯಗಳ ಬಗ್ಗೆ ಗಹನವಾದ ಚರ್ಚೆಗಳನ್ನು ನಡೆಸಲಾಯಿತು ಮತ್ತು ಜಿಜ್ಞಾಸೆಗಳನ್ನು – ಅಹವಾಲುಗಳನ್ನು ಈ ಸಂಧರ್ಭದಲ್ಲಿ    ವ್ಯಕ್ತಪಡಿಸಲಾಯಿತು. 

ಲಕ್ಷಾಂತರ ಸಂಖ್ಯೆಯಲ್ಲಿ ಪರದೇಶಗಳಲ್ಲಿ ವಿಶೇಷತಃ ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುತ್ತಿರುವ ಅನಿವಾಸಿ ಕನ್ನಡಿಗರಿಂದ ದೇಶಕ್ಕೆ- ರಾಜ್ಯಕ್ಕೆ ಗಣನೀಯವಾದ ವಿದೇಶಿ ವಿನಿಮಯ ಲಭವಾಗುತ್ತಿದ್ದು, ರಾಜ್ಯದ ಅಭಿವೃದ್ಧಿಯಲ್ಲಿ ದೊಡ್ಡ ರೀತಿಯಲ್ಲಿ ಅನಿವಾಸಿ ಕನ್ನಡಿಗರ ಕಡೆಯಿಂದ ಧನಾತ್ಮಕವಾದ ಉಪಲಬ್ಧಿಗಳು ಆಗುತ್ತಿದ್ದರೂ ಕರ್ನಾಟ್ಟಕದ ಸರಕಾರ ಅನಿವಾಸಿ ಕನ್ನಡಿಗರ ಬಗ್ಗೆ ಯಾವುದೇ ಕಾಳಜಿ ತೋರದೆ ಬರೇ ಮಾತುಗಳ ಭರವಸೆ ಮಾತ್ರ ಕೊಡುತ್ತಾ ಬರುತ್ತಿರುವ ಬಗ್ಗೆ ಡಿ.ಕೆ.ಶಿವಕುಮಾರ್ ಅವರ ಗಮನವನ್ನು ಸೆಳೆಯಲಾಯಿತು. ಅನಿವಾಸಿ ಕನ್ನಡಿಗರಿಗೆ ಮತದಾನದ ಹಕ್ಕು, ಅನಿವಾಸಿ ಕನ್ನಡಿಗ ನಿಗಮಕ್ಕೆ ಉಪಾಧ್ಯಕ್ಷರ ನೇಮಕ , ವಾರ್ಷಿಕ ಬಜೆಟ್ ನಲ್ಲಿ ಅನಿವಾಸಿ ಕನ್ನಡಿಗರ ಕಲ್ಯಾಣಕ್ಕಾಗಿ ಸಾಕಷ್ಟು  ಮೀಸಲು ಮೊತ್ತ  ಮೊದಲಾದ ವಿಷಯಗಳ ಬಗ್ಗೆ ವಿಸ್ತಾರಿತವಾದ ಚರ್ಚೆ ನಡೆಸಲಾಯಿತು.

ಬಿಸಿಫ್ ವತಿಯಿಂದ ಡಾ.ಕಾಪು ಮಹಮದ್ , ಎಂ.ಈ.ಮೂಳೂರು, ಅಬ್ದುಲ್ ಲತೀಫ್ ಮುಲ್ಕಿ, ಅಫೀಕ್ ಹುಸೈನ್, ಯಾಕೂಬ್ ದೀವಾ ಮೊದಲಾದ ನಾಯಕರು ಡಿ.ಕೆ.ಶಿವಕುಮಾರ್ ಆವರನ್ನು ಸ್ಮರಣಿಕೆ ನೀಡಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. 

ಸೇರಿದ ಎಲ್ಲರೊಂದಿಗೆ ಬಹಳ ಸ್ನೇಹಮಯಿಯಾಗಿ ಸಂವಹನ ದೊಂದಿಗೆ ಬೆರೆತ ಡಿ.ಕೆ.ಶಿವಕುಮಾರ್ ಎಲ್ಲರಿಗೂ ಕೃತಜ್ಞತೆ ಸಮರ್ಪಿಸಿದರು.


Ads on article

Advertise in articles 1

advertising articles 2

Advertise under the article