
ಶೂಟಿಂಗ್ ಸೆಟ್‌ವೊಂದರ ಮೇಕಪ್ ರೂಮ್‌ನಲ್ಲಿ ಫ್ಯಾನ್‌ಗೆ ನೇ#ಣು ಬಿಗಿದು ಆ#ತ್ಮ#ಹ#ತ್ಯೆ ಮಾಡಿಕೊಂಡ ನಟಿ
Saturday, December 24, 2022
ಮುಂಬೈ(Headlines Kannada): ಅರೇಬಿಯನ್ ನೈಟ್ಸ್ ಆಧಾರಿತ ಟಿವಿ ಸಿರೀಸ್ `ಅಲಿ ಬಾಬಾ ದಸ್ತಾನ್-ಇ-ಕಾಬೂಲ್’ನಲ್ಲಿ ಶಹಜಾದಿ ಮರಿಯಮ್ ಪಾತ್ರದಲ್ಲಿ ನಟಿಸಿರುವ ನಟಿ ತುನಿಷಾ ಶರ್ಮಾ (20) ಶನಿವಾರ ಆ#ತ್ಮ#ಹ#ತ್ಯೆಗೆ ಶರಣಾಗಿದ್ದಾರೆ.
ತಮ್ಮ ಟಿ.ವಿ ಕಾರ್ಯಕ್ರಮದ ಸೆಟ್‌ವೊಂದರ ಮೇಕಪ್ ರೂಮ್‌ನಲ್ಲಿ ಫ್ಯಾನ್‌ಗೆ ನೇ#ಣು ಬಿಗಿದುಕೊಂಡು ತುನಿಷಾ ಶರ್ಮಾ ಆ#ತ್ಮ#ಹ#ತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲೇ ಮೃ#ತಪಟ್ಟಿದ್ದಾರೆ.
ಆ#ತ್ಮ#ಹ#ತ್ಯೆ ಮಾಡಿಕೊಂಡ ನೀತಿ ತುನಿಷಾ ಸಹನಟ ಶೀಜಾನ್ ಮೊಹಮ್ಮದ್ ಖಾನ್ ಅವರ ಮೇಕಪ್ ರೂಮ್‌ನಲ್ಲಿದ್ದರು ಎನ್ನಲಾಗಿದೆ. ತನ್ನ ರೂಮ್ ಬಾಗಿಲು ಹಾಕಿದ್ದನ್ನು ನೋಡಿ ಶೀಜಾನ್ ಕರೆ ತುನಿಷಾಗೆ ಮಾಡಿದ್ದಾರೆ. ಪದೇ ಪದೇ ಕರೆದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿದಾಗ ಕೃ#ತ್ಯ ಬೆಳಕಿಗೆ ಬಂದಿದೆ. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸಲ್ಮಾನ್ ಖಾನ್ ಹಾಗು ಸೋನಾಕ್ಷಿ ಸಿನ್ಹಾ ಅಭಿನಯದ ದಬಾಂಗ್ 3ನಲ್ಲಿ ಅವರು ಅತಿಥಿ ಪಾತ್ರ ನಿರ್ವಹಿಸಿದ್ದರು.