ಈ ಬಾರಿಯ ಬಿಗ್‌ ಬಾಸ್‌ ವಿನ್ನರ್ ಯಾರು..? ಫಿನಾಲೆಯಲ್ಲಿದ್ದಾರೆ 5 ಮಂದಿ ಪ್ರಬಲ ಸ್ಪರ್ಧಿಗಳು!

ಈ ಬಾರಿಯ ಬಿಗ್‌ ಬಾಸ್‌ ವಿನ್ನರ್ ಯಾರು..? ಫಿನಾಲೆಯಲ್ಲಿದ್ದಾರೆ 5 ಮಂದಿ ಪ್ರಬಲ ಸ್ಪರ್ಧಿಗಳು!



ಬೆಂಗಳೂರು (Headlines Kannada): ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಹುನಿರೀಕ್ಷಿತ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ಈಗ ಫೈನಲ್‌ಗೆ ಕ್ಷಣಗಣನೆ ಆರಂಭವಾಗಿದೆ. ಇಂದು (ಶುಕ್ರವಾರ) ಮತ್ತು ನಾಳೆ ಫೈನಲ್ ನಡೆಯಲಿದೆ. ಬಿಗ್‌ ಬಾಸ್‌ ಮನೆಯಲ್ಲಿ ಈಗ 5 ಮಂದಿ ಪ್ರಬಲ ಸ್ಪರ್ಧಿಗಳಿದ್ದಾರೆ. ರೂಪೇಶ್‌ ರಾಜಣ್ಣ, ರೂಪೇಶ್‌ ಶೆಟ್ಟಿ, ರಾಕೇಶ್‌ ಅಡಿಗ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್‌ ಬಿಗ್‌ ಬಾಸ್‌ ಮನೆಯ ಟಾಪ್‌ 5ರ ಸ್ಥಾನದಲ್ಲಿದ್ದಾರೆ. 

ಇವರಲ್ಲಿ ಈ ಬಾರಿಯ ಬಿಗ್ ಬಾಸ್ ಸೀಸನ್ 9 ರ ವಿಜೇತ ಯಾರಾಗಬಹುದು ಎಂಬುದು ಕುತೂಹಲ ಕೆರಳಿಸಿದೆ. ಸೋಷಿಯಲ್ ಮೀಡಿಯಾ ಅಭಿಪ್ರಾಯಗಳ ಪ್ರಕಾರ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗು ನಟ ರೂಪೇಶ್ ಶೆಟ್ಟಿ ಮಧ್ಯೆ ತೀವ್ರ ಪೈಪೋಟಿಯಿದೆ. ಜೊತೆಗೆ ರಾಕೇಶ್ ಅಡಿಗ ಕೂಡ ಕಣದಲ್ಲಿದ್ದಾರೆ. ಮನೆಯೊಳಗೇ ರೂಪೇಶ್ ರಾಜಣ್ಣ ಮಾಡಿಕೊಂಡು ಬಂದಿರುವ ಹೋರಾಟ, ವಿರೋಧ, ನಡೆದುಕೊಂಡು ಬಂದ ರೀತಿ ಕೂಡ ವೀಕ್ಷರಲ್ಲಿ ಅವರ ಬಗ್ಗೆ ಹೆಚ್ಚು ಒಲವು ಮೂಡುವಂತೆ ಮಾಡಿದೆ.

ಇಲ್ಲಿಯವರೆಗೆ ಬಿಗ್ ಬಾಸ್ ಕನ್ನಡ ಇತಿಹಾಸದಲ್ಲಿ ಮಹಿಳಾ ಸ್ಪರ್ಧಿ ಗೆದ್ದಿದ್ದು ಒಂದೇ ಬಾರಿ. ಈ ಬಾರಿ ದೀಪಿಕಾ ದಾಸ್ ಹಾಗು ದಿವ್ಯಾ ಉರುಡುಗ ಫೈನಲ್ ತಲುಪಿರುವ ಕಾರಣ ಇವರಿಬ್ಬರಲ್ಲಿ ಒಬ್ಬರು ವಿನ್ ಆಗಲಿ ಎಂದು ಕೆಲವರ ಅಭಿಪ್ರಾಯ. ಅಂತಿಮವಾಗಿ ಯಾರು  ಬಿಗ್‌ ಬಾಸ್‌ ಗೆಲುವಿನ ನಗೆ ಬೀರುತ್ತಾರೆ ಎಂದು ಶನಿವಾರ ಅಧಿಕೃತವಾಗಿ ಪ್ರಕಟವಾಗಲಿದೆ. ಕಲರ್ಸ್ ಕನ್ನಡದಲ್ಲಿ ಶುಕ್ರವಾರ ಹಾಗು ಶನಿವಾರ ರಾತ್ರಿ 7:30ಕ್ಕೆ ಫೈನಲ್ ಕಾರ್ಯಕ್ರಮ ಪ್ರಸಾರವಾಗಲಿದೆ.

Ads on article

Advertise in articles 1

advertising articles 2

Advertise under the article