ಚಾಮರಾಜನಗರದ ಕಟ್ನವಾಡಿಯ ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ!
Monday, December 26, 2022
ಚಾಮರಾಜನಗರ(Headlines Kannada): ಚಾಮರಾಜನಗರ ತಾಲೂಕಿನ ಕಟ್ನವಾಡಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ 2 ಚಿರತೆ ಮರಿಗಳು ಪತ್ತೆಯಾಗಿದೆ.
ಕಬ್ಬು ಬೆಳೆಗಾರ ಗುರು ಎಂಬವರು ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು ಕಟಾವು ಮಾಡುತ್ತಿದ್ದಾಗ ಚಿರತೆ ಮರಿಗಳು ಜೇಮೀನಿನ ಒಂದೆಡೆ ಪತ್ತೆಯಾಗಿದೆ. ಚಿರತೆ ಮರಿಗಳನ್ನೂ ಕೈಗೆತ್ತಿಕೊಂಡ ಗುರು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಚಿರತೆ ಮರಿಗಳನ್ನು ಇಲಾಖೆಗೆ ಒಪ್ಪಿಸಿದ್ದಾರೆ.
ಮರಿಗಳಿ ಆರೋಗ್ಯವಾಗಿದ್ದು, ಈ ಮರಿಗಳನ್ನು ಹುಡುಕಿಕೊಂಡು ತಾಯಿ ಚಿರತೆ ಎರಡು-ಮೂರು ದಿನಗಳಲ್ಲಿ ಕಬ್ಬಿನ ಗದ್ದೆಗೆ ವಾಪಸ್ ಬರುವ ಸಾಧ್ಯಾತೆ ಹೆಚ್ಚಿದೆ. ಹೀಗಾಗಿ ಇಲಾಖೆಯು ಕ್ಯಾಮರಾ ಟ್ರ್ಯಾಪ್ ಅಳವಡಿಸಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.