ಕಾಂಗ್ರೆಸ್ಸಿನ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯ ಸುದ್ದಿ ಸುಳ್ಳು! ಟಿಕೆಟ್ ಬಹುತೇಕ ಖಚಿತವಾಗಿರುವುದು ಯಾರಿಗೆ ?
ನ್ಯೂಸ್ ವೆಬ್ ತಾಣವೊಂದರಲ್ಲಿ ಈ ಬಗ್ಗೆ ಸುದ್ದಿಯೊಂದು ಪ್ರಕಟವಾಗಿದ್ದು, ಸಂಭಾವ್ಯರ ಪಟ್ಟಿಯಲ್ಲಿ ಮೂರ್ನಾಲ್ಕು ಹಾಲಿ ಶಾಸಕರನ್ನು ಹೊರತುಪಡಿಸಿ ಉಳಿದ ಎಲ್ಲಾ ಹಾಲಿ ಶಾಸಕರಿಗೆ ಬಹುತೇಕ ಟಿಕೆಟ್ ಸಿಗುವುದು ಖಚಿತವಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಕಾಂಗ್ರೆಸ್ ಪ್ರಮುಖ ನಾಯಕರನ್ನು ಸಂಪರ್ಕಿಸಿದಾಗ, ಇದು ಸತ್ಯಕ್ಕೆ ದೂರವಾದ ಸುದ್ದಿ, ಸುಳ್ಳು ಸುದ್ದಿ ಎಂದು ಹೇಳಿದ್ದಾರೆ.
ಟೆಕೆಟ್ ಬಹುತೇಕ ಖಚಿತ...
ಕರಾವಳಿ ಭಾಗದಲ್ಲಿ ಟಿಕೇಟಿಗಾಗಿ ತೀವ್ರ ಪೈಪೋಟಿ ಇದ್ದು, ಕೆಲವೆಡೆ ಆಕಾಂಕ್ಷಿಗಳಿಗೆ ಟೆಕೆಟ್ ಬಹುತೇಕ ಖಚಿತವಾಗಿದೆ.
ಬಂಟ್ವಾಳ- ರಮಾನಾಥ್ ರೈ, ಪುತ್ತೂರು- ಶಂಕುಂತಲಾ ಶೆಟ್ಟಿ, ಅಶೋಕ್ ರೈ, ಮೂಡಬಿದರೆ- ಮಿಥುನ್ ರೈ, ರಾಜಶೇಕರ್ ಕೊಟ್ಯಾನ್, ಸುಳ್ಯ- ಕೃಷ್ಣಪ್ಪ, ನಂದ ಕುಮಾರ್, ಮಂಗಳೂರುದಕ್ಷಿಣ - ಜೆ.ಆರ್.ಲೊಬೋ, ಐವಾನ್ ಡಿಸೋಜ, ಉಳ್ಳಾಲ- ಯು.ಟಿ.ಖಾದರ್ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಉತ್ತರ ಕ್ಷೇತ್ರಕ್ಕೆ ಈ ಬಾರಿ ಯುವ ನಾಯಕ, ಕೊಡುಗೈ ದಾನಿ ಎಂದೇ ಖ್ಯಾತರಾಗಿರುವ ಸರಳ ಸಜ್ಜನಿಕೆಯ ಇನಾಯತ್ ಅಲಿಯವರಿಗೆ ಟಿಕೆಟ್ ಬಹತೇಕ ಖಚಿತವಾಗಿದ್ದು, ಈ ಕ್ಷೇತ್ರದ ಜನರು ಕೂಡಾ ಇನಾಯತ್ ಅಲಿ ಪರ ಬ್ಯಾಟ್ ಮಾಡುತ್ತಿದ್ದಾರೆ.
ಜೊತೆಗೆ ಬೆಳ್ತಂಗಡಿಯಲ್ಲಿ ವಸಂತ ಬಂಗೇರ ಅವರಿಗೆ ಟಿಕೆಟ್ ಪಕ್ಕ ಆಗಿದ್ದು, ಉಡುಪಿ ಕ್ಷೇತ್ರದಲ್ಲಿ ಹಲವಾರು ಆಕಾಂಕ್ಷಿಗಳಿದ್ದು, ಈ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇದೆ. ಕೃಷ್ಣಮೂರ್ತಿ ಆಚಾರ್ಯ, ಅಮೃತ್ ಶೆಣೈ ಅವರ ಹೆಸರು ಮುನ್ನೆಲೆಯಲ್ಲಿದೆ. ಬೈಂದೂರು- ಗೋಪಾಲಪೂಜಾರಿ, ಕುಂದಾಪುರ-ಪ್ರತಾಪ್ ಚಂದ್ರ ಶೆಟ್ಟಿ, ಕಾಪು- ವಿನಯ್ ಕುಮಾರ್ ಸೊರಕೆ ಅವರಿಗೆ ಟೆಕೆಟ್ ಪಕ್ಕ ಆಗಿದ್ದು, ಅವರು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.