ಪ್ರತಿಭಾವಂತ ಯುಎಇ ಕನ್ನಡ ವಿದ್ಯಾರ್ಥಿಗಳನ್ನು ಗೌರವಿಸಿದ ದುಬೈ ಕನ್ನಡ ಸಂಘ

ಪ್ರತಿಭಾವಂತ ಯುಎಇ ಕನ್ನಡ ವಿದ್ಯಾರ್ಥಿಗಳನ್ನು ಗೌರವಿಸಿದ ದುಬೈ ಕನ್ನಡ ಸಂಘ


ಅಬುಧಾಬಿ(Headlines Kannada): ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘವು ಇತ್ತೀಚೆಗೆ ನಡೆಸಿದ ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ-22 ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿ ವ್ಯಾಸಾಂಗ ಮಾಡಿ 2021-22ನೇ ಸಾಲಿನ ಶೈಕ್ಷಣಿಕ ವರ್ಷದ  SSLC ಮತ್ತು PUCಯಲ್ಲಿ  ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ, ಹಾಗೂ ಶೇಖ್ ಹಂದಾನ್, ಶೇಖ್ ಸುಲ್ತಾನ್, ಶೇಖಾ ಫಾತಿಮಾ ಪ್ರಶಸ್ತಿ ಪಡೆದ ಯುಎಇ ಕನ್ನಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.







ಹೆಮ್ಮೆಯ ಕನ್ನಡಿಗರು ತಂಡದ ಶಾಲು, ದಸರಾ ಪದಕ  ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡ ಪ್ರಶಸ್ತಿಯನ್ನು ಹೆಮ್ಮೆಯ ದುಬೈ ಕನ್ನಡ ಸಂಘದ ಸಮಿತಿ ಸದಸ್ಯರು ವಿದ್ಯಾರ್ಥಿಗಳಿಗೆ ವಿತರಿಸಿದರು.

ಕನ್ನಡ ವಿದ್ಯಾರ್ಥಿನಿ ನಿಯೋಲಾ ಪ್ರತಿಷ್ಠಿತ ಶೇಖಾ ಫಾತಿಮಾ ಪ್ರಶಸ್ತಿ ಪಡೆದರೆ 2021-22ನೇ ಸಾಲಿನ ಶೆಕ್ಷಣಿಕ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಆಂಚಲ್ ಪ್ರಥಮ, ನಫೀಸಾ ದ್ವಿತೀಯ, ರಿಕ್ಝಹ್ ಮತ್ತು ಅಮ್ಮರ್ ರಶೀದ್ ತೃತೀಯ ಅಂಕಗಳನ್ನು ಗಳಿಸಿದರೆ ಎಸ್ ಎಸ್ ಎಲ್ ಸಿ ಯಲ್ಲಿ ದಿಯಾ ಪ್ರಥಮ, ಶಿಯೂಲಿ ಮತ್ತು ರೀಗನ್ ದ್ವೀತಿಯ, ರಾಹುಲ್ ಮತ್ತು ಐಶ್ವರ್ಯ ತೃತೀಯ ಸ್ಥಾನ ಪಡೆದರು.

ಹೆಮ್ಮೆಯ ದುಬೈ ಕನ್ನಡ ಸಂಘದಲ್ಲಿ ಅಧ್ಯಕ್ಷರಾಗಿ  ಸುದೀಪ್ ದಾವಣಗೆರೆ, ಮಾಜಿ ಅಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿಯಾಗಿ  ಶಂಕರ್ ಬೆಳಗಾವಿ, ಮುಖ್ಯ ಸಂಚಾಲಕರಾಗಿ ರಫೀಕಲಿ ಕುಂಡಂಡ ಕೊಡಗು ಮತ್ತು ಸಮಿತಿ ಸದಸ್ಯರುಗಳಾಗಿ ಪಲ್ಲವಿ ದಾವಣಗೆರೆ, ಹಾದಿಯ ಮಂಡ್ಯ, ವಿಷ್ಣುಮೂರ್ತಿ ಮೈಸೂರು, ಮಧು ದಾವಣಗೆರೆ, ಅನಿತಾ ಬೆಂಗಳೂರು,, ಡಾ.ಸವಿತಾ ಮೈಸೂರು, ಮೊಹೀನ್  ಹುಬ್ಬಳ್ಳಿ, ವರದರಾಜ್ ಕೋಲಾರ, ಅಕ್ರಮ್ ಕೊಡಗು ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article