ಕೋರ್ಟಿನಲ್ಲಿ ವಿಚಾರಣೆಯ ವೇಳೆ ನ್ಯಾಯಾಧೀಶರ ಮೇಲೆಯೇ ಕ#ಲ್ಲು ಎ#ಸೆದ ಕೊ#ಲೆ ಯ#ತ್ನ ಪ್ರಕರಣದ ಆರೋಪಿ! ಮುಂದೆ ಏನಾಯಿತು ನೋಡಿ...

ಕೋರ್ಟಿನಲ್ಲಿ ವಿಚಾರಣೆಯ ವೇಳೆ ನ್ಯಾಯಾಧೀಶರ ಮೇಲೆಯೇ ಕ#ಲ್ಲು ಎ#ಸೆದ ಕೊ#ಲೆ ಯ#ತ್ನ ಪ್ರಕರಣದ ಆರೋಪಿ! ಮುಂದೆ ಏನಾಯಿತು ನೋಡಿ...ಗಾಂಧಿನಗರ(Headlines Kannada): ಕೋರ್ಟ್ ಒಳಗೆ ವಾದ ನಡೆಯುವ ಸ್ಥಳದಲ್ಲಿಯೇ ಕೊ#ಲೆ ಯತ್ನ ಆರೋಪಿಯೊಬ್ಬ ನ್ಯಾಯಾದಾಧೀಶರ ಮೇಲೆಯೇ ಕ#ಲ್ಲು ಎ#ಸೆದಿರುವ ಘಟನೆಯೊಂದು ಗುಜರಾತ್‌'ನ ನವಸಾರಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದೆ. ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆ ಎನ್​ಡಿಟಿವಿ ವರದಿ ಮಾಡಿದೆ. 

ಧರ್ಮೇಶ್ ರಾಥೋಡ್ ಕೃ#ತ್ಯವೆಸಗಿದ ಆರೋಪಿ ಎಂದು ಗುರುತಿಸಲಾಗಿದೆ. ಕೊ#ಲೆ ಯ#ತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಥೋಡ್ ಬಂಧಿತನಾಗಿದ್ದಾನೆ. ಈತನ ಮೇಲೆ ಸೆಕ್ಷನ್ 307 ಹಾಗು ಅ#ಪಾಯಕಾರಿ ಶ#ಸ್ತ್ರಾಸ್ತ್ರಗಳನ್ನು ಬಳಸಿ ಹ#ಲ್ಲೆಗೆ ಯತ್ನಿಸಿದ್ದಾನೆ ಎಂದು ಸೆಕ್ಷನ್ 326ರ ಅಡಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕೊ#ಲೆ ಯತ್ನ ಪ್ರಕರಣ ಸಂಬಂಧ ಆರೋಪಿ ರಾಥೋಡ್ ಸೂರತ್‌ನ ಲಾಜ್‌ಪೋರ್ ಜೈ#ಲಿನಲ್ಲಿದನು. ಶುಕ್ರವಾರ ಆರೋಪಿಯನ್ನು ವಿಚಾರಣೆಗೆಂದು ನವಸಾರಿಯಲ್ಲಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಪೊಲೀಸರು ಕರೆ ತಂದಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಯುವಾಗ ನ್ಯಾ. ಎ ಆರ್ ದೇಸಾಯಿ ಅವರ ಮೇಲೆ ಆರೋಪಿ ರಾಥೋಡ್​ ಕಲ್ಲು ಎಸೆದಿದ್ದಾನೆ ಎನ್ನಲಾಗಿದೆ.

ಅದೃಷ್ಟವಶಾತ್, ಕ#ಲ್ಲು ಈ ವೇಳೆ ಗುರಿ ತಪ್ಪಿ ಹೆಚ್ಚುವರಿ ಸೆಷನ್ಸ್ ನ್ಯಾ. ಎ ಆರ್ ದೇಸಾಯಿ ಅವರ ಹಿಂಭಾಗದ ಗೋಡೆಗೆ ಬಡಿದಿದೆ. ಇದರಿಂದ ನ್ಯಾ. ಎ ಆರ್ ದೇಸಾಯಿ ಅವರಿಗೆ ಯಾವುದೇ ರೀತಿಯ ಗಾ#ಯಗಳಾಗಿಲ್ಲ ಎಂದು ನವಸಾರಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಘಟನೆ ಸಂಬಂಧ ಸೂರತ್‌ನ ಲಾಜ್‌ಪೋರ್ ಜೈಲಿನಿಂದ ನವಸಾರಿ ಸೆಷನ್ಸ್ ಕೋರ್ಟ್‌ಗೆ ರಾಥೋಡ್‌ರನ್ನು ಕರೆದೊಯ್ದ 3 ಮಂದಿ ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯಲೋಪಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ರಾಥೋಡ್ ವಿರುದ್ಧ ಹೊಸ FIR ದಾಖಲಾಗಿದೆ. ಘಟನೆಗೆ ಸಾಕ್ಷಿಯಾಗಿರುವ ವಕೀಲ ಪ್ರತಾಪ್ ಮಹಿದಾ ಅವರು ಆರೋಪಿ ರಾಥೋಡ್ ಈ ಹಿಂದೆ ಮ್ಯಾಜಿಸ್ಟ್ರೇಟ್ ಮೇ#ಲೆ ಶೂ ಎ#ಸೆದಿದ್ದನು ಎಂದು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article