ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಬಿಜೆಪಿ ಅದರಿಂದಲೇ ವಿನಾಶವಾಗಲಿದೆ: ಎಚ್.ಡಿ. ಕುಮಾರಸ್ವಾಮಿ ಕಿಡಿ
Saturday, December 24, 2022
ಬೆಂಗಳೂರು(Headlines Kannada): ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಆಡಳಿತ ಪಕ್ಷ BJPಗೆ ಅಭಿವೃದ್ಧಿ ಬೇಕಾಗಿಲ್ಲ. BJP ಜನರನ್ನು ಭಾವನಾತ್ಮಕವಾಗಿಸುವ ಮೂಲಕ ಮತ ಪಡೆಯಲು ಮುಂದಾಗಿದೆ. ಆದರೆ, ಮತದಾರರು BJPಯ ಚೇಷ್ಟೆಗಳಿಗೆ ಬಲಿಯಾಗುವುದಿಲ್ಲ. BJPಯ ಧರ್ಮ ರಾಜಕಾರಣವೇ ಅದರ ವಿನಾಶಕ್ಕೆ ಕಾರಣವಾಗಲಿದೆ ಎಂದು ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಆಡಳಿತದ ವಿರುದ್ಧ ಕಿಡಿಕಾರಿದರು. 2ಎ ಮೀಸಲಾತಿ ಬಯಸುತ್ತಿರುವ ಪಂಚಮಸಾಲಿಗಳ ಕೋಟಾ ವರ್ಗವನ್ನು ನಿರ್ಧರಿಸುವ ಮೊದಲು ಅವರ ಶೈಕ್ಷಣಿಕ, ಆರ್ಥಿಕ ಹಾಗು ಸಾಂಸ್ಕೃತಿಕ ಸ್ಥಿತಿ ಮತ್ತು ಅವರ ದೈನಂದಿನ ಆದಾಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು ಎಂದು ಸಲಹೆ ನೀಡಿದರು.