
ಉಡುಪಿಯಲ್ಲಿ ನೇಕಾರ ಸದಸ್ಯರಿಗೆ 44 ಲಕ್ಷ ರೂ. ಮೊತ್ತದ ಮಿತವ್ಯಯ ನಿಧಿ ವಿತರಣೆ
Monday, December 12, 2022
ಉಡುಪಿ(Headlines Kannada): ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ವತಿಯಿಂದ ನೇಕಾರ ಸದಸ್ಯರಿಗೆ ಮಿತವ್ಯಯ ನಿಧಿ ಹಸ್ತಾಂತರ ಕಾರ್ಯಕ್ರಮ ನಗರದಲ್ಲಿ ಇಂದು ನಡೆಯಿತು.
ಶಾಸಕ ಕೆ. ರಘುಪತಿ ಭಟ್ ಅವರು 19 ಫಲಾನುಭವಿಗಳಿಗೆ ಒಟ್ಟು 44 ಲಕ್ಷ ರೂಪಾಯಿ ಮಿತವ್ಯಯ ನಿಧಿಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಉಡುಪಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ ಅಧ್ಯಕ್ಷ ರತ್ನಾಕರ್ ಇಂದ್ರಾಳಿ, ಉಪಾಧ್ಯಕ್ಷ ಗೀತಾ ಕೇಶವ ಶೆಟ್ಟಿಗಾರ್, ಉಡುಪಿ ನಗರ ಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಮಂಜುನಾಥ್ ಮಣಿಪಾಲ್, ಶಿವಳ್ಳಿ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಶಶಿಕಾಂತ್ ಕೋಟ್ಯಾನ್, ಉಡುಪಿ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್, ವಕೀಲ ನಾಗರಾಜ್ ಕಿನಿಮೂಲ್ಕಿ ಉಪಸ್ಥಿತರಿದ್ದರು.