ಪೆರ್ಡೂರು: ಟಿಪ್ಪರ್ ಡಿ#ಕ್ಕಿ ಹೊಡೆದು ಪಾದಾಚಾರಿ ವೃದ್ಧ ಮೃ#ತ್ಯು
Wednesday, December 14, 2022
ಪೆರ್ಡೂರು (Headlines Kannada): ಟಿಪ್ಪರ್ ವೊಂದು ಡಿ#ಕ್ಕಿ ಹೊಡೆದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧರೋರ್ವರು ಮೃ#ತಪಟ್ಟ ದಾರುಣ ಘಟನೆ ಪೆರ್ಡೂರು ಮೇಲ್ಪೇಟೆಯ ಬಿಎಮ್ ಸ್ಕೂಲ್ ಎದುರು ಬುಧವಾರ ಬೆಳಿಗ್ಗೆ ನಡೆದಿದೆ.
ಮೃ#ತರನ್ನು ಅಲಂಕಾರು ನಿವಾಸಿ 70ವರ್ಷದ ಮಂಜಯ್ಯ ಶೆಟ್ಟಿ ಎಂದು ಗುರುತಿಸಲಾಗಿದೆ. ಪೆರ್ಡೂರಿನಿಂದ ಹಿರಿಯಡಕ ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ವೊಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜಯ್ಯ ಶೆಟ್ಟಿಗೆ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ರಸ್ತೆಗೆ ಬಿದ್ದ ಮಂಜಯ್ಯ ಶೆಟ್ಟಿ ಅವರ ತಲೆ ಮೇಲೆ ಟಿಪ್ಪರ್ ನ ಚ#ಕ್ರ ಹ#ರಿದಿದೆ. ಇದರಿಂದ ತಲೆ ಸಂಪೂರ್ಣ ಛಿ#ದ್ರಗೊಂಡಿದ್ದು, ಸ್ಥಳದಲ್ಲೆ ಅವರು ಉ#ಸಿರು#ಚೆಲ್ಲಿದ್ದಾರೆ.
ಟಿಪ್ಪರ್ ಚಾಲಕ ಪೆರ್ಡೂರಿನ ಗ್ಯಾರೇಜ್ ವೊಂದರಲ್ಲಿ ಚಕ್ರ ಬದಲಾಯಿಸಿಕೊಂಡು ಹಿರಿಯಡಕ ಕಡೆಗೆ ಸಾಗುತ್ತಿದ್ದನು. ಅಪಘಾತ ನಡೆದ ಬಳಿಕ ಚಾಲಕ ಸ್ಥಳದಲ್ಲಿ ಟಿಪ್ಪರ್ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.