ಬರೋಬ್ಬರಿ 20 ಕೋಟಿ ರೂ ಕೊಟ್ಟು ಅತ್ಯಂತ ದುಬಾರಿ ನಾಯಿ ಖರೀದಿಸಿದ ಬೆಂಗಳೂರಿನ ಸತೀಶ್!
ಬೆಂಗಳೂರು (Headlines Kannada): ಬೆಂಗಳೂರಿನ ಸತೀಶ್ ಎಂಬವರು ಬರೋಬ್ಬರಿ ರೂ.20 ಕೋಟಿ ರೂ ಕೊಟ್ಟು ಕಾಕೇಸಿಯನ್ ಷೆಪರ್ಡ್ ಜಾತಿಗೆ ಸೇರಿದ ನಾಯಿ ಖರೀದಿಸಿ ಸುದ್ದಿಯಾಗಿದ್ದಾರೆ.
ಇಡೀ ವಿಶ್ವದಲ್ಲೇ ಬೆಂಗಳೂರು ಮಹಾನಗರ ಅತ್ಯಂತ ದುಬಾರಿ ಶ್ವಾನಗಳಿರುವ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಕಡಬೊಮ್ ಕೆನ್ನೆಲ್ಸ್ ಸಂಸ್ಥೆ ಮಾಲೀಕರು ಹಾಗೂ ಭಾರತೀಯ ನಾಯಿ ತಳಿಗಳ ಸಂಘದ ಸತೀಶ್ ಅವರು ಅತ್ಯಂತ ದುಬಾರಿ ನಾಯಿಗಳನ್ನು ಖರೀದಿಸುವಲ್ಲಿ ಖ್ಯಾತಿಗಳಿಸಿದವರು.
ಕಾಕೇಸಿಯನ್ ಷೆಪರ್ಡ್ ಜಾತಿಯ ನಾಯಿಗಳು, ಬಹಳ ಧೈರ್ಯ, ವಿಶ್ವಾಸ, ಭಯರಹಿತ ಹಾಗೂ ಅತ್ಯಂತ ಬುದ್ಧಿವಂತ ನಾಯಿಗಳೆಂಬ ಖ್ಯಾತಿಗೆ ಪಾತ್ರವಾಗಿದ್ದು, ಇವು ನೋಡಲು ಬಹಳ ದೊಡ್ಡ ಗಾತ್ರವನ್ನು ಹೊಂದಿರುತ್ತವೆ ಹಾಗು 10-12 ವರ್ಷ ಜೀವಿಸುತ್ತವೆ.
ಈ ಕಾಕೇಸಿಯನ್ ಷೆಪರ್ಡ್ ಜಾತಿಗೆ ಸೇರಿದ ನಾಯಿಗಳು ಅಮೇನಿಯಾ, ರಷ್ಯಾ, ಟರ್ಕಿ, ಸಕಾಸ್ಸಿಯ ಹಾಗೂ ಜಿಯೋರ್ಜಿಯದಂತಹ ದೇಶಗಳಲ್ಲಿ ಮಾತ್ರ ಲಭಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಈ ಜಾತಿಯ ನಾಯಿ ಕಾಣುವುದು ವಿರಳ.
ಈ ನಾಯಿ ಬಗ್ಗೆ ಸತೀಶ್ ಅವರ ಹೇಳುವ ಪ್ರಕಾರ, ಈ ಕಾಕೇಸಿಯನ್ ಷೆಪರ್ಡ್ಸ್ ಜಾತಿಯ ನಾಯಿಗಳನ್ನು ಭೂಮಿ ಒತ್ತುವರಿಯನ್ನು ತಡೆಗಟ್ಟಲು, ಹಸು ಹಾಗೂ ಇತರೆ ಸಾಕುಪ್ರಾಣಿಗಳಂತಹ ಜಾನುವಾರುಗಳನ್ನು ನರಿ, ಚಿರತೆಗಳಂತಹ ಇತರೆ ಪ್ರಾಣಿಗಳಿಂದ ಕಾಪಾಡಿಕೊಳ್ಳಲು ಬಳಕೆ ಮಾಡುತ್ತಾರೆ ಎಂದುವುದು.