2023ನೇ ಸಾಲಿನ ಪದ್ಮ ಪ್ರಶಸ್ತಿ ಪ್ರಕಟ; ಭೈರಪ್ಪ, ಎಸ್.ಎಂ.ಕೃಷ್ಣರಿಗೆ ಪ್ರಶಸ್ತಿ
ನವದೆಹಲಿ(Headlines Kannada): 2023ನೇ ಸಾಲಿನ ಪದ್ಮವಿಭೂಷಣ ಮತ್ತು ಪದ್ಮಶ್ರೀ ಎಂಬ ಎರಡು ವಿಭಾಗಗಳಲ್ಲಿ ಒಟ್ಟು 26 ವ್ಯಕ್ತಿಗಳಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಲಾಗಿದೆ.
ಗಣರಾಜ್ಯೋತ್ಸವದ ಮುನ್ನಾದಿನದಂದು ಸರ್ಕಾರ ಅತ್ಯುನ್ನತ ಸಾಗರಿಕ ಪ್ರಶಸ್ತಿ ಪ್ರಕಟಿಸಿದ್ದು, ಈ ವರ್ಷದ ಪದ್ಮವಿಭೂಷಣ (ಮರಣೋತ್ತರ) ಪ್ರಶಸ್ತಿಯನ್ನು ORS ಸಂಶೋಧಕ ದಿಲೀಪ್ ಮಹಲನಾಬಿಸ್ ಅವರಿಗೆ ವೈದ್ಯಕೀಯ ಕ್ಷೇತ್ರದಲ್ಲಿ (ಪೀಡಿಯಾಟ್ರಿಕ್ಸ್) ನೀಡಲಾಗಿದೆ.
ಎಸ್.ಎಲ್.ಭೈರಪ್ಪ ಅವರಿಗೆ ಪದ್ಮಭೂಷಣ, ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ, ರಾಣಿ ಮಾಚಯ್ಯ ಹಾಗೂ ತಮಟೆಯ ತಂದೆ ಎಂದು ಪ್ರಖ್ಯಾತರಾದ ಮುನಿ ವೆಂಕಟಪ್ಪ ಅವರಿಗೆ ಪದ್ಮಶ್ರೀ ನೀಡಲಾಗಿದೆ.
ಪದ್ಮಶ್ರೀ ಪ್ರಶಸ್ತಿಯನ್ನು ಬುಡಕಟ್ಟು ಹೋ ಭಾಷಾ ವಿದ್ವಾಂಸರಾದ ಜನುಮ್ ಸಿಂಗ್ ಸೋಯ್ ಅವರಿಗೆ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ನೀಡಿ ಗೌರವಿಸಲಾಗಿದೆ. ಜೊತೆಗೆ ಟೊಟೊ (ಡೆಂಗ್ಕಾ) ಭಾಷಾ ಸಂರಕ್ಷಕ, ಧನಿರಾಮ್ ಟೊಟೊ ಹಾಗು ಮಂಡಿಯ ಸಾವಯವ ಕೃಷಿಕರಾದ ನೆಕ್ರಮ್ ಶರ್ಮಾ ಮತ್ತು ತೆಲಂಗಾಣದ ಭಾಷಾಶಾಸ್ತ್ರ ಪ್ರಾಧ್ಯಾಪಕರಾದ ಬಿ ರಾಮಕೃಷ್ಣ ರೆಡ್ಡಿ ಅವರಿಗೆ ಪದ್ಮಶ್ರೀ ಲಭಿಸಿದೆ.