ಭೀಮಾ ಕೋರೆಗಾಂವ್ ದಲಿತರ ಆ#ತ್ಮಗೌರಕ್ಕಾಗಿ, ಜಾತೀಯತೆಯ ವಿರುದ್ಧ ನಡೆದ ಯುದ್ಧ: ಜಯನ್ ಮಲ್ಪೆ

ಭೀಮಾ ಕೋರೆಗಾಂವ್ ದಲಿತರ ಆ#ತ್ಮಗೌರಕ್ಕಾಗಿ, ಜಾತೀಯತೆಯ ವಿರುದ್ಧ ನಡೆದ ಯುದ್ಧ: ಜಯನ್ ಮಲ್ಪೆ

ಉಡುಪಿ(Headlines Kannada): ಇತಿಹಾಸದಲ್ಲಿ ಧರ್ಮಕ್ಕಾಗಿ, ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ ಯುದ್ಧಗಳು ನಡೆದರೆ, ಭೀಮಾ ಕೋರೆಗಾಂವ್ ಯುದ್ಧವು ದಲಿತರ ಘನತೆಗಾಗಿ, ಆತ್ಮಗೌರವಕ್ಕಾಗಿ, ಜಾತೀಯತೆಯ ವಿರುದ್ಧ ನಡೆದ ಯುದ್ಧವಾಗಿತ್ತು ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಅವರು ಜಿಲ್ಲೆಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಸಮಿತಿ ಏರ್ಪಡಿಸಿದ ಭೀಮಾ ಕೊರೇಗಾಂವ್ 205ನೇ ವಿಜಯೋತ್ಸವ ದಿನಾಚರಣೆಯ ಪ್ರಯುಕ್ತ ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಮುಂಭಾಗ ಮಾತನಾಡುತ್ತಾ,  ದೇಶದಲ್ಲಿ ಬರಿ ಬಲಿಕಥೆಗಳೇ ತುಂಬಿದೆ. ಅದೂ ಶೋಷಿತ ತಳ ಸಮುದಾಯದವರ, ದ್ರಾವಿಡರ ಬಲಿ ಕತೆಗಳು. ಏಕಲವ್ಯ, ಶಂಭೂಕ, ಬಲಿ ಚಕ್ರವರ್ತಿ, ಮಹಿಷಾಸುರ ಹೀಗೆ ಬ#ಲಿ ಕತೆಗಳೊಂದಿಗೆ ಗೋಳಾಡುವ ತಳ ಸಮುದಾಯಗಳಿಗೆ ಭೀಮಾ ಕೋರೆಗಾವ್ ಯುದ್ಧ ಸಂಭ್ರಮಿಸುವಂತೆ ಮಾಡುತ್ತದೆ ಎಂದರು.

ಪ್ರಗತಿಪರ ಚಿಂತಕ ಪ್ರೊ..ಕೆ ಫಣಿರಾಜ್ ಮಾತನಾಡಿ, ಪ್ರಸ್ತುತ ಈ ಸಮಾಜದಲ್ಲಿರುವ ಹೊಸ ಪೇಶ್ವೆಗಳನ್ನು ದಲಿತ ಜಗತ್ತು ಎದುರಿಸಬೇಕಾಗಿದೆ. ಬ್ರಾ#ಹ್ಮಣಶಾಹಿ ದಮನದ ಸಂಕೇತವಾಗಿ ನಮಗೆ ಭೀಮಾ ಕೋರೆಗಾಂವ್ ಇತಿಹಾಸವಿದೆ ಎಂದು ಅವರು ಮಹಾರ್ ರೆಜಿಮೆಂಟನ್ನು ವಿವರಿಸಿದರು.

ಚಿಂತಕ ಶ್ರೀರಾಮ ದಿವಾಣ ಮಾತನಾಡಿ ದಲಿತರನ್ನು ಅಲ್ಪಸಂಖ್ಯಾತರನ್ನು,ಹಿಂದುಳಿದ  ವರ್ಗಗಳ ನಾಶಮಾಡಲು ಈ ದೇಶವನ್ನು ಆಳ್ವಿಕೆ ಮಾಡುವ ಸರಕಾರ ಮಾಡುತ್ತಿದೆ, ರಾಜಪ್ರಭುತ್ವದ ಉಳಿವುಗಾಗಿ ಹೋರಾಡುವ ಸಂಘಪರಿವಾರ ಬ್ರಾಹ್ಮನೇತರ ಸಮುದಾಯವನ್ನು ಅತ್ಯಂತ ಕ್ರೂರವಾಗಿ ನೋಡಿದೆ ಎಂದರು.

ದಲಿತ ಮುಖಂಡರಾದ ಸುಂದರ ಮಾಸ್ತರ್, ಮಂಜುನಾಥ ಗಿಳಿಯಾರು ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ದಲಿತ ನಾಯಕರಾದ ವಾಸುದೇವ ಮುದ್ದೂರು, ರಾಜುಬೆಟ್ಟಿನಮನೆ, ಶಾಮ್‌ಸುಂದರ್, ಹರೀಶ್ ಸಾಲ್ಯಾನ್,  ಸಂತೋಷ್ ಕಪ್ಪೆಟ್ಟು, ಗಣೇಶ್ ನೆರ್ಗಿ, ಸಂಜೀವ ಬಳ್ಕೂರು, ಮಂಜುನಾಥ ನಾಗೂರು, ಸುರೇಶ್ ಬಾರ್ಕೂರು, ಭಾಸ್ಕರ್ ಕೆಗಾಲ್, ಗೋಂವಿದ ಹಳಗೇರಿ, ಮಂಜುನಾಥ ಕಪ್ಪೆಟ್ಟು, ಭಗವಾನ್ ಮಲ್ಪೆ, ಪರಮೇಶ್ವರ ಉಪ್ಪೂರು, ಎನ್.ಎ.ನೇಜಾರು, ಕೃಷ್ಣ,ಪ್ರಸಾದ್ ನೆರ್ಗಿ, ಸತೀಶ್ ಕಪ್ಪೆಟ್ಟು , ಸುಕೇಶ್ ಪುತ್ತೂರು, ಜಗದೀಶ್ ಗಂಗ್ಗೊಳಿ ಮುಂತ್ತಾದವರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಉಡುಪಿಯ ಅಜ್ಜರಕಾಡು ಹುತ್ತಾತ್ಮ ಸ್ಮಾರಕ ಬಳಿಯಿಂದ ಭೀಮಾ ಕೋರೆಗಾಂವ್ ವಿಜಯಸ್ತಂಭದ ಟ್ಯಾಬ್ಲೊದೊಂದಿಗೆ ಮೆರವಣಿಗೆ ಹೋರಟು ಜೋಡು ಮಾರ್ಗವಾಗಿ, ಉಡುಪಿಯ ಹೃದಯಭಾಗದಿಂದ ಸರ್ವಿಸ್ ಬಸ್ಸ್ ನಿಲ್ದಾಣದಲ್ಲಿ ಬಹಿರಂಗ ಸಭೆ ನಡೆಯಿತು.

Ads on article

Advertise in articles 1

advertising articles 2

Advertise under the article