ಕೇಂದ್ರದ ನೋಟು ಬ್ಯಾನ್ ನಿರ್ಧಾರವನ್ನು ಕಾನೂನುಬಾ#ಹಿರ ಎಂದ ನ್ಯಾಯಮೂರ್ತಿ ಬಿ.ವಿ.ನಾಗರತ್ನ

ಕೇಂದ್ರದ ನೋಟು ಬ್ಯಾನ್ ನಿರ್ಧಾರವನ್ನು ಕಾನೂನುಬಾ#ಹಿರ ಎಂದ ನ್ಯಾಯಮೂರ್ತಿ ಬಿ.ವಿ.ನಾಗರತ್ನನವದೆಹಲಿ(Headlines Kannada): ಕೇಂದ್ರ ಸರ್ಕಾರದ ನೋಟು ಬ್ಯಾನ್ ನಿರ್ಧಾರ ಕಾನೂನುಬಾ#ಹಿರವಾಗಿದ್ದು, ನೋಟು ಬ್ಯಾನ್ ಪ್ರಕ್ರಿಯೆಯನ್ನು ನಡೆಸಬಾರದಿತ್ತು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಸಾಂವಿಧಾನಿಕ ಪೀಠವು 4:1 ಬಹುಮತದೊಂದಿಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ನೋಟು ಬ್ಯಾನ್ ನಿರ್ಧಾರ ಎತ್ತಿಹಿಡಿದ ಸಂದರ್ಭದಲ್ಲಿ ನ್ಯಾಯಮೂರ್ತಿ ನಾಗರತ್ನ  ತಮ್ಮ ತೀ#ವ್ರ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

2016ರ ನವೆಂಬರ್ 8ರ ಕೇಂದ್ರದ ಅಧಿಸೂಚನೆಯನ್ನು "ಕಾನೂನುಬಾ#ಹಿರ" ಎಂದು ಕರೆದಿರುವ ನ್ಯಾಯಮೂರ್ತಿ ನಾಗರತ್ನ ಅವರು, "ನನ್ನ ಅಭಿಪ್ರಾಯದಲ್ಲಿ ನವೆಂಬರ್ 8 ರ ಅಧಿಸೂಚನೆಯ ಮೂಲಕ ನೋಟು ಬ್ಯಾನ್ ಕ್ರಮವು ಕಾನೂನುಬಾ#ಹಿರವಾಗಿದೆ. ನೋಟು ಬ್ಯಾನ್ ಕಾನೂನು ವಿರುದ್ದವಾಗಿ ಚಲಾಯಿಸಿದ ಅಧಿಕಾರ. ಹೀಗಾಗಿ ನೋಟು ಬ್ಯಾನ್ ಕಾನೂನು ಬಾ#ಹಿರ. ಅದನ್ನು ಜಾರಿಗೊಳಿಸಿದ ರೀತಿ ಕಾನೂನಿಗೆ ಅನುಸಾರವಾಗಿಲ್ಲ'' ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article