ಕೊರೋನಾಗೆ ಹೆದರಿ 3 ವರ್ಷಗಳಿಂದ ಮಗನನ್ನು ಕೂಡಿಹಾಕಿ ಮನೆಯೊಳಗೆಯೇ ಇದ್ದ ಮಹಿಳೆ! ಮುಂದೆ ಆಗಿದ್ದೇನು..?

ಕೊರೋನಾಗೆ ಹೆದರಿ 3 ವರ್ಷಗಳಿಂದ ಮಗನನ್ನು ಕೂಡಿಹಾಕಿ ಮನೆಯೊಳಗೆಯೇ ಇದ್ದ ಮಹಿಳೆ! ಮುಂದೆ ಆಗಿದ್ದೇನು..?

ನವದೆಹಲಿ: ಕೊರೋನಾಗೆ ಹೆದರಿ 2020ರಿಂದ ಮೂರು ವರ್ಷಗಳ ಕಾಲ ಮನೆಯ ಹೊರಗೆ ಬಾರದ ಮಹಿಳೆಯೊಬ್ಬಳು ತನ್ನ ಮಗನನ್ನು ಕೂಡ ಮನೆಯೊಳಗೇ ಕೂಡಿಹಾಕಿದ್ದು, ಕೊನೆಗೂ ನಿನ್ನೆ ಗೃಹ ಬಂಧನದಿಂದ ಹೊರಬಂದಿದ್ದಾರೆ.

ಈ ಘಟನೆ ನಡೆದಿರುವುದು ಹರಿಯಾಣದ ಗುರುಗ್ರಾಮ್​ನ ಮಾರುತಿ ಕುಂಜ್ ನಗರದಲ್ಲಿ. ಇಲ್ಲಿನ ನಿವಾಸಿ ಮುನ್ಮುನ್ ಮಾಝಿ 2020 ರಿಂದ ತಾನು ಹೊರಬಾರದೆ ತನ್ನ ಮಗನನ್ನು ಹೊರಗೆ ಕಳುಹಿಸದೆ  ಮನೆ ಒಳಗೆ ಕೂಡಿ ಹಾಕಿದ್ದಾಳೆ. ಈ ಸುದ್ದಿ ತಿಳಿದು ಮಂಗಳವಾರ ಆರೋಗ್ಯ, ಪೊಲೀಸ್ ಹಾಗು ಮಕ್ಕಳ ಸೇವಾ ಇಲಾಖೆಯ ಅಧಿಕಾರಿಗಳ ತಂಡ ಈ ತಾಯಿ ಮಗುವನ್ನು ಗೃಹ ಬಂಧನದಿಂದ ಹೊರತರುವಲ್ಲಿ ಯಶಸ್ವಿಯಾಗಿದ್ದಾರೆ.

ಕೋರೊನಾದಿಂದ ಬಚಾವ್ ಆಗಲು ತನ್ನ ಮನೆಯಲ್ಲಿಯೇ ಮೂರು ವರ್ಷಗಳ ಕಾಲ  ಈ ಮಹಿಳೆ ತನ್ನ ಮಗನನ್ನು ಕೂಡಿಹಾಕಿಟ್ಟು ಬದುಕು ನಡೆಸಿದ್ದಾಳೆ. ಈ ವೇಳೆ ಸ್ವತಃ ಗಂಡನನ್ನು ಮನೆ ಒಳಗೆ ಬರಲು ಬಿಟ್ಟಿರಲಿಲ್ಲ. ಗಂಡ ಸುಜನ್ ಮಾಝಿ ಪ್ರೈವೇಟ್ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 2020 ರಲ್ಲಿ ಲಾಕ್​ಡೌನ್ ನಿಯಮಗಳು ಸಡಿಲಿಸಿದ ನಂತರ ಕೆಲಸಕ್ಕೆಂದು ತೆರಳಿ ಸುಜನ್ ಸಂಜೆ ಮನೆಗೆ ಮರಳುವಷ್ಟರಲ್ಲಿ ಹೆಂಡತಿ ಮನೆ ಬಾಗಿಲನ್ನು ತೆಗಿಯದೇ ರಾದ್ದಂತ ಮಾಡುತ್ತಿದ್ದಳು ಎಂದು ಟೈಮ್ಸ್ ಆ ಇಂಡಿಯಾ ವರದಿ ಮಾಡಿದೆ.

ಪತ್ನಿಯ ಈ ಕಿರಿಕಿರಿಯಿಂದ ಬೇಸತ್ತ ಸುಜನ್ ಮಾಝಿ ಅವರು ಬಾಡಿಗೆಗೆ ಮನೆಯನ್ನು ತೆಗೆದುಕೊಂಡರು. ಕಳೆದ 3 ವರ್ಷಗಳಿಂದ ಅವರು ಪತ್ನಿ ಮುನ್ಮುನ್ ಮತ್ತು ಅವರ ಪುತ್ರನೊಂದಿಗೆ ವೀಡಿಯೊ ಕರೆ ಮೂಲಕ ಸಂಪರ್ಕದಲ್ಲಿದ್ದರು. ಅವರು ಮನೆಯ ಬಾಡಿಗೆ, ವಿದ್ಯುತ್ ಬಿಲ್‌ಗಳು ಮತ್ತು ಮಗನ ಶಾಲಾ ಶುಲ್ಕವನ್ನು ಹೊರಗಡೆ ಇದ್ದುಕೊಂಡೇ ಪಾವತಿಸುತ್ತಿದ್ದರು. ಜೊತೆಗೆ ಪ್ರತಿ ನಿತ್ಯ ದಿನಸಿಗಳನ್ನು ಖರೀದಿಸಿ ಮನೆಯ ಬಾಗಿಲಿನ ಹೊರಗೆ ಇಟ್ಟು ಬರುತ್ತಿದ್ದರು. ಈಗ ಮಹಿಳೆ ಹಾಗು ಆಕೆಯ ಮಗನನ್ನು ಹೊರತರಲಾಗಿದೆ.

Ads on article

Advertise in articles 1

advertising articles 2

Advertise under the article