
ಕಾಯಾರ್ ಕುಟುಂಬ ಮತ್ತು ನನ್ನೂರ ಜಮಾಅತ್ ಪ್ರೀತಿಯಿಂದ ನನ್ನ ಹೃದಯ ತುಂಬಿಸಿಬಿಟ್ಟರು...
ಬೆಂಗಳೂರಲ್ಲಿ ಮೊನ್ನೆ ನನಗೆ ದೊರೆತ ರಾಜ್ಯಮಟ್ಟದ ಪುರಸ್ಕಾರ ಮತ್ತು ಈ ದಿನ (5-2- 2003) ಉಜಿರೆಯಲ್ಲಿ ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ನಿಂದ ನನಗೆ ದೊರೆಯಲಿರುವ ಸನ್ಮಾನವನ್ನು ಪರಿಗಣಿಸಿ ನಿನ್ನೆ ನನಗೆ ಎರಡು ಕಡೆ ಸನ್ಮಾನ ಕಾರ್ಯಕ್ರಮ ನಡೆಯಿತು. ಈ ಎರಡೂ ಸನ್ಮಾನಗಳು ನನ್ನ ಹೃತ್ಕರ್ಣ ತುಂಬಿ ನಾನು ಭಾವುಕನಾಗಲು ಕಾರಣ ಈಯೆರಡೂ ಸನ್ಮಾನಗಳನ್ನು ನೀಡಿದ್ದು ನನ್ನ ನೆಚ್ಚಿನ ಕಾಯಾರ್ ಫ್ಯಾಮಿಲಿ ಮತ್ತು ನನ್ನ ಪ್ರೀತಿಯ ಕಲ್ಕಟ್ಟ ಇಲ್ಯಾಸ್ ಮಸೀದಿಯ ಜಮಾಅತರು ಎಂಬುದಾಗಿದೆ. ತಮ್ಮವರು, ತಮ್ಮ ಆಪ್ತರು ತೋರುವ ಪ್ರೀತಿ, ಅಂಗೀಕಾರ ಇದೆಯಲ್ಲಾ? ಅದರ ಒಂದು ರಸಾನುಭೂತಿ ಅವರ್ಣನೀಯ.
ಕ್ಯಾಯಾರ್ ಫ್ಯಾಮಿಲಿ ಕಮಿಟಿಯ ಅಧ್ಯಕ್ಷರಾದ ಇಂಜಿನಿಯರ್ ಅಬ್ದುರ್ರಝಾಕ್ ಹಾಜಿಯವರ ವಿದ್ಯಾನಗರದಲ್ಲಿರುವ ನಿವಾಸದಲ್ಲಿ ಕ್ಯಾಯಾರ್ ಫ್ಯಾಮಿಲಿ ಎಂಬ ಕಾನ್ಸೆಪ್ಟಿನ ಪ್ರಮುಖ ರೂವಾರಿ ಕಾಯಾರ್ ಸಿದ್ದೀಖ್ ಸಖಾಫಿ ಹಾಗೂ ಕಾಯಾರ್ ಫ್ಯಾಮಿಲಿಯ ಮುಖ್ಯಸ್ಥರಲ್ಲೊಬ್ಬರಾದ ಮುಹಮ್ಮದ್ ಮದನಿ ಸಾಮಣಿಗೆ, ಸಿದ್ದೀಖ್ ಅರ್ಕಾನ, ಸ್ವಾಲಿಹ್ ಮೊಂಟೆಪದವು ಹಾಗೂ ಮನೋಜ್ಞವಾಗಿ ನನ್ನ ಸಾಧನೆಗಳನ್ನು ವಿವರಿಸಿದ ಅಬ್ದುಸ್ಸಮದ್ ಮೊಂಟೆಪದವು, ಶಮೀರ್ ಗ್ರಾಮಚಾವಡಿ ಮತ್ತು ಫ್ಯಾಮಿಲಿಯ ಇತರ ಅನೇಕರ ಉಪಸ್ಥಿತಿಯಲ್ಲಿ ಸನ್ಮಾನ ಕಾರ್ಯ ನಡೆಯಿತು. ಸನ್ಮಾನ ನಡೆಸಿಕೊಟ್ಟ ಹಾಗೂ ಸಹಕರಿಸಿದ ಎಲ್ಲಾ ಹಿರಿ- ಕಿರಿಯರಿಗೆ ನಾನು ಆಭಾರಿಯಾಗಿದ್ದೇನೆ.
ನನ್ನ ಸ್ವಂತ ಜಮಾಅತ್ ಕಲ್ಕಟ್ಟದ ಇಲ್ಯಾಸ್ ಜುಮಾ ಮಸ್ಜಿದ್ ನಲ್ಲಿ ಎಸ್. ವೈ. ಎಸ್. ಮತ್ತು ಮುಸ್ಲಿಮ್ ಜಮಾಅತ್ ರೂಪೀಕರಣ ನಡೆಯಿತು. ಈ ಸಂದರ್ಭದಲ್ಲಿ ನನ್ನ ಊರವರೂ ಜಮಾಅತರೂ ನನ್ನನ್ನು ಪ್ರೀತಿ, ವಿಶ್ವಾಸದಿಂದ ಮನತುಂಬಿಸಿಬಿಟ್ಟರು. ಹೊರಗಿನವರ ಸನ್ಮಾನ, ಪುರಸ್ಕಾರಕ್ಕಿಂತ ಒಳಗಿನವರ ಸನ್ಮಾನ, ಗೌರವಾದರದಲ್ಲಿ ಒಂದು ವಿಶೇಷ ಅನುಭೂತಿ ಇರುತ್ತದೆ. ಯಾಕೆಂದರೆ ಸ್ವಂತದವರು, ಸ್ವನಾಡಿನವರು ಯಾವಾಗಲೂ ಕಂಡು, ಒಡನಾಡುವವರಾದುದರಿಂದ ಒಂದು ಸದರ ಇರುತ್ತದೆ. ಅಸೂಯೆ ಇರುತ್ತದೆ, ಹಲವು ವಿಧ ವೈಮನಸ್ಯಗಳಿರುತ್ತವೆ. ಹೊರಗೆ ಎಷ್ಟೇ ಹೆಸರುವಾಸಿಯಾಗಿದ್ದರೂ ಊರಲ್ಲಿ, ಫ್ಯಾಮಿಲಿಯಲ್ಲಿ ಏನಾದರೊಂದು ಹುಳುಕು ಹುಡುಕಿ ನಗಣ್ಯಗೊಳಿಸುವ ರೂಡಿ ಇರುತ್ತದೆ. ಆದ್ದರಿಂದ ಫ್ಯಾಮಿಲಿ ಮತ್ತು ಸ್ವನಾಡಿನ ಪುರಸ್ಕಾರ ಒಬ್ಬ ವ್ಯಕ್ತಿಗೆ ದೊರೆಯುವ ದೊಡ್ಡ ಅಂಗೀಕಾರವಾಗಿದೆ. ನನ್ನನ್ನು ನನ್ನೂರವರು ಮತ್ತು ಸ್ವಫ್ಯಾಲಿಯವರು ಸನ್ಮಾನಿಸಿದಾಗ ಇದು ಅತ್ಯಂತ ದೊಡ್ಡ ಪ್ರಶಸ್ತಿ ಎಂದು ನನ್ನ ಮನತುಂಬಿ ಬರಲು ಕಾರಣ ಇದಾಗಿತ್ತು. ಜಮಾಅತ್ ನ ಪ್ರಮುಖರಾದ ಮುಹಮ್ಮದ್ ಹಾಜಿಯವರ ಉಪಸ್ಥಿತಿಯಲ್ಲಿ ಮುಹಮ್ಮದ್ ಮಾಸ್ಟರ್, ಮೋನು ಹಾಜಿ, ಮುಹಮ್ಮದ್ ಮದನಿ, ರಫೀಕ್ ಮುಸ್ಲಿಯಾರ್ , ಮುತ್ತಲಿಬ್ ಮುಂತಾದವರ ಸಾನ್ನಿಧ್ಯದಲ್ಲಿ ಹೃದಯಸ್ಪರ್ಶಿ ಸನ್ಮಾನ ನಡೆದುದಲ್ಲದೆ ಹೊಸತಾಗಿ ರೂಪಿತವಾದ
" ಮುಸ್ಲಿಮ್ ಜಮಾಅತ್" ನ ಉಪಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿ ದೊಡ್ಡ ಜವಾಬ್ದಾರಿ ಯನ್ನು ಕೂಡಾ ನನ್ನ ಮೇಲಿನ ವಿಶ್ವಾಸದಿಂದ ಅರ್ಪಿಸಿಬಿಟ್ಟರು.
ಈ ಪ್ರೀತಿ, ವಿಶ್ವಾಸಕ್ಕೆ ನನ್ನೂರ ಜಮಾಅತರಿಗೆ ನಾನು ಕೃತಜ್ಞನಾಗಿರುತ್ತೇನೆ. ಸರ್ವರಿಗೂ ಸರ್ವಶಕ್ತನು ಸರ್ವಾನುಗ್ರಹ ಸನ್ಮಾನಿಸಲಿ, ಸರ್ವರಿಗೂ ಸರ್ವಸುಖದ ಸ್ವರ್ಗ ಕರುಣಿಸಲೆಂದು ಸವಿನಯ ಪ್ರಾರ್ಥನೆ.
- ಡಿ.ಐ. ಅಬೂಬಕರ್ ಕೈರಂಗಳ